
ಹೊನ್ನಾವರ ; ಫೌಂಡೇಶನ್ ವತಿಯಿಂದ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾದ್ಯಮ ಶಾಲೆ ಕೊಳಗದ್ದೆ ಯಲ್ಲಿ, 6 ರಿಂದ 9 ನೆ ತರಗತಿಯ ಮಕ್ಕಳಿಗೆ “ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಿತು.
56 ವಿದ್ಯಾರ್ಥಿಗಳಿಗೆ ಹೊನ್ನಾವರದ ಪರಿಸರ ಹಾಗೂ ಕಡಲಾಮೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ತದನಂತರ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಹೊನ್ನಾವರ ಫೌಂಡೇಶನ್ ಆಯೋಜಿಸಿದ ಕಾರ್ಯಕ್ರಮವು ಮಕ್ಕಳಿಗೆ ಕಡಲಾಮೆಯ ಸುಂದರ ಜೀವನವನ್ನು ಪರಿಚಯಿಸುವ ಅವಕಾಶವನ್ನು ನೀಡಿತು. ಈ ಸಾಕ್ಷ್ಯಚಿತ್ರ ಪ್ರದರ್ಶನವು ಮಕ್ಕಳಿಗೆ, ಮೀನುಗಾರರ ಸೂಕ್ಷ್ಮ ಜೀವನ ಮತ್ತು ಅಲ್ಲಿನ ಪರಿಸರದ ಮಹತ್ವವನ್ನು ಕುರಿತು ಮಾಹಿತಿ ನೀಡಿತು.
ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಮತ್ತು ಸಮಾಜಕ್ಕೆ ಜಾಗೃತಿ ಸಂದೇಶವನ್ನು ಹರಿಸಲು ಸಹಕಾರಿಯಾಗುತ್ತವೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ



More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ