ಕುಮಟಾ: ಸಹಾಯ ಮಾಡುವ ನೆಪ ಮಾಡಿಕೊಂಡು ಎ.ಟಿ.ಎಂ ಕಾರ್ಡ್ ಅದಲು ಬದಲು ಮಾಡಿ ಹಣ ವಂಚಿಸುತ್ತಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ ಘಟನೆ ನಡೆದಿದೆ.
ಮೂಲತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ, ಹಾಲಿ ಮೈಸೂರು ಜಿಲ್ಲೆಯ ಗಿರಿದರ್ಶಿನಿ ಲೇಔಟ್ ನಿವಾಸಿ ಕಿರಣಕುಮಾರ ಬಿ.ಕೆ (೨೯) ಬಂಧಿತ ಆರೋಪಿ. ಕುಮಟಾ ಪಟ್ಟಣದ ಹೊಸ ನಿಲ್ದಾಣ ಬಳಿಯ ಎಸ್.ಬಿ.ಐ ಎ.ಟಿ.ಎಂನಲ್ಲಿ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಈತ ಮೋಸ ಮಾಡಿದ್ದ. ಕಾರ್ಡಿನ ಪಾಸ್‌ವರ್ಡ್ ಅರಿತು ಅವರಿಗೆ ಗೊತ್ತಾಗದಂತೆ ಕಾರ್ಡ್ ಅದಲು ಬದಲು ಮಾಡಿಕೊಂಡಿದ್ದ. ಬಳಿಕ ಆ ಎ.ಟಿ.ಎಂ ಬಳಸಿ ೭೦,೯೦೫ ರೂಪಾಯಿ ಹಣ ತೆಗೆದು ಎಗರಿಸಿದ ಬಗ್ಗೆ ೨೦೨೧ ರ ಫೆಬ್ರವರಿಯಲ್ಲಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖಾ ತಂಡವನ್ನು ರಚಿಸಿ ಸಿ.ಸಿ.ಕ್ಯಾಮರಾ ಸಹಾಯದಿಂದ ಆರೋಪಿಯನ್ನು ಮೈಸೂರಿನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಅಲ್ಲದೇ, ಡೆಬಿಟ್ ಕಾರ್ಡ್ನಿಂದ ಸ್ವೆöಪ್ ಮಾಡಿ ತೆಗೆದ ಹಣ ಮತ್ತು ಹಣದಿಂದ ಖರೀದಿ ಮಾಡಿದ ಆಭರಣಗಳು ಹಾಗೂ ಇದೇ ರೀತಿ ವಂಚಿಸಲು ಇಟ್ಟುಕೊಂಡಿರುವ ಬೇರೆ ಬ್ಯಾಂಕ್ ಡೆಬಿಟ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಭಟ್ಕಳ ಡಿ.ವೈ.ಎಸ್.ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ಶಿವಪ್ರಕಾಶ ನಾಯ್ಕ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಆನಂದಮೂರ್ತಿ, ರವಿ ಗುಡ್ಡಿ, ಸುಧಾ ಅಘನಾಶಿನಿ, ಚಂದ್ರಮತಿ ಪಟಗಾರ, ಎ.ಎಸ್.ಐ ನಾಗರಾಜಪ್ಪ, ಸಿಬ್ಬಂದಿಗಳಾದ ದಯಾನಂದ ನಾಯ್ಕ,ಪ್ರದೀಪ್ ನಾಯಕ್.ಗಣೇಶ ನಾಯ್ಕ, ಸಂತೋಷ ಬಾಳೇರ, ಕೃಷ್ಣ ಎನ್.ಜೆ, ಬಸವರಾಜ ಜಾಡರ್, ಲೋಕೇಶ ಅರಿಶಿಣಗುಪ್ಪಿ, ಮಂಜುನಾಥ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಸುಧೀರ ಮಡಿವಾಳ, ರಮೇಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ