December 22, 2024

Bhavana Tv

Its Your Channel

ಶನಿವಾರ ಕುಮಟಾದಲ್ಲಿ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಿಟ್ ವಿತರಣೆ ಕಾರ್ಯಕ್ರಮ ಗಲಾಟೆ, ವಾಗ್ವಾದ, ಮಾತಿನ ಚಕಮಕಿ, ಪ್ರತಿಭಟನೆ

ಕುಮಟಾ ; ಇಲಾಖೆಯು ಕಾರ್ಮಿಕರ ಕಾರ್ಡ್ ಹೊಂದಿದ ೧೦೦ ಮಂದಿಗೆ ಮೊದಲ ದಿನ ಶಾಸಕರ ಮೂಲಕ ಕಿಟ್ ನೀಡುವ ಕಾರ್ಯಕ್ರಮವನ್ನು ಹವ್ಯಕ ಸಭಾಭವನದಾಲ್ಲಿ ಹಮ್ಮಿಕೊಂಡಿತ್ತು. ಆದರೆ, ಸಾವಿರಾರು ಮಂದಿ ಬಂದ ಕಾರಣ ಎಲ್ಲರಿಗೂ ಕಿಟ್ ಹಂಚಲಾಗದೆ ಸಮಸ್ಯೆಯಾಯಿತು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ಸೂರಜ್ ನಾಯ್ಕ, ಹಿಂದಿನ ಬಾರಿಯೂ ಕಾರ್ಮಿಕರಿಗೆ ಸಮರ್ಪಕವಾಗಿ ನ್ಯಾಯ ಒದಗಿಸದ ಬಗ್ಗೆ ಅಸಮಾಧಾನ ಹೊಂದಿದ್ದೆ. ಈ ವರ್ಷವೂ ಕೂಡ ಹಂಸಕ್ಷೀರ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಎಲ್ಲರೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಬಿಟ್ಟು ಕಿಟ್ ಪಡೆಯಲು ಬಂದಿದ್ದಾರೆ. ಆದರೆ, ಕೇವಲ ನೂರೇ ಜನರಿಗೆ ಎಂಬ ಕಾರಣ ಹೇಳಿ ಉಳಿದ ಕಾರ್ಮಿಕರಿಗೆ ಅನ್ಯಾಯ ಮಾಡುವುದು ಖಂಡನೀಯ. ಇಂದು ಇಲ್ಲಿ ಬಂದವರಿಗೆ ಕಿಟ್ ನೀಡುವವರೆಗೂ ನಾವಿಲ್ಲಿಂದ ಏಳುವುದಿಲ್ಲ ಎಂದು ಪಟ್ಟು ಹಿಡಿದರು.

ಪಿ ಎಸ್ ಐ ಆನಂದಮೂರ್ತಿ ಅವರು ಪ್ರತಿಭಟನಾ ನಿರತರ ಬಳಿ ತೆರಳಿ ಮನವೊಲಿಸುವ ಪ್ರಯತ್ನ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಇಷ್ಟೆಲ್ಲಾ ಮಂದಿ ಸೇರುವುದು ತಪ್ಪು. ಜೊತೆಗೆ ಎಲ್ಲರಿಗೂ ಆಯಾ ವ್ಯಾಪ್ತಿಯಲ್ಲಿ ಸದ್ಯದಲ್ಲೇ ಕಿಟ್ ನೀಡುತ್ತೇವೆ ಎಂದು ಅಧಿಕಾರಿಗಳು ಕೂಡ ತಿಳಿಸಿದ್ದಾರೆ. ಹಾಗಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಸಲಹೆ ನೀಡಿದರು. ಆದರೆ, ಇದಕ್ಕೆ ಕಾರ್ಮಿಕರು ಒಪ್ಪದೇ ಇನ್ನಷ್ಟು ಏರುದನಿಯಲ್ಲಿ ಮಾತನಾಡಿದರು. ಸುಮಾರು ಮೂರು ಗಂಟೆವರೆಗೂ ಈ ಪ್ರಹಸನ ಮುಂದುವರೆಯಿತು. ಕೊನೆಯಲ್ಲಿ ಕಾರ್ಮಿಕ ಅಧಿಕಾರಿಗಳು ಎಲ್ಲರ ಮನೆಗೆ ಕಿಟ್ ತಲುಪಿಸುವ ಜವಾಬ್ದಾರಿ ತೆಗೆದುಕೊಂಡ ಕಾರಣ ಎಲ್ಲರ ನಿರ್ಣಯದೊಂದಿಗೆ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

error: