ಕುಮಟಾ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸರಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ೭೪ ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣದ ನೆಲ್ಲಿಕೇರಿ ಶಾಲೆಯಲ್ಲಿ ಶಾಸಕ ದಿನಕರ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.ನಂತರ ಮಾತನಾಡಿದ ಅವರು ದೇಶದ ಐಕ್ಯತೆ ಮತ್ತು ಸಾರ್ವಭೌಮತೆಯನ್ನು ಕಾಪಾಡುವದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ.ಹೀಗಾಗಿ ಪ್ರತಿಯೊಬ್ಬರಿಗೂ ತಾನು ಭಾರತೀಯನೆಂಬ ಹೆಮ್ಮೆ ಇರಬೇಕು ಎಂದರು.ಬ್ರಿಟೀಷರಿAದ ಸ್ವಾತಂತ್ರ‍್ಯ ಪಡೆದ ಬಳಿಕ ನಮ್ಮ ರಾಷ್ಟ್ರ ತನ್ನದೇ ಆದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯನ್ನು ರೂಢಿಸಿಕೊಂಡು ಸಂವಿಧಾನವನ್ನು ಜಾರಿಗೆ ತಂದ ದಿನವನ್ನು ನಾವು ಇಂದು ಗಣರಾಜ್ಯೋತ್ಸವವಾಗಿ ಆಚರಿಸುತ್ತಿದ್ದು, ಇದು ಪ್ರಜೆಗಳ ಹಬ್ಬವೂ ಹೌದು ಎಂದರು.
ಐತಿಹಾಸಿಕ ಸ್ಥಳ ಮಿರ್ಜಾನ್ ಕೋಟೆ, ತಹಶಿಲ್ದಾರ ಕಛೇರಿ ಹಾಗೂ ತಾಲೂಕಾಡಳಿತದ ವತಿಯಿಂದ ಪಟ್ಟಣದ ಮಣಕಿ ಮೈದಾನದಲ್ಲಿ ಧ್ವಜಾರೋಹಣ ನೆರವೇರಿತು. ಈ ವೇಳೆ ಶಾಲಾ ವಿದ್ಯಾರ್ಥಿಗಳು ಪಥಸಂಚಲನ ನಡೆಸಿ ಗೌರವ ಸಲ್ಲಿಸಿದರು.
ಮಣಕಿ ಮೈದಾನದಲ್ಲಿ ನಡೆದ ಪಥಸಂಚಲದ ಗೌರವ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಾಲಸರ, ದೇಶ ಕಾಪಾಡುವುದು ಗಡಿಯಲ್ಲಿದ್ದ ಸೈನಿಕರ ಕೆಲಸ ಮಾತ್ರವಲ್ಲದೆ ಈ ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವೂ ಹೌದು. ಈ ದೇಶದ ಪ್ರತಿ ಪ್ರಜೆಯೂ ಸಂವಿಧಾನವನ್ನು ಅರ್ಥೈಸಿಕೊಂಡು ಅದರ ಪರಿಧಿಯಲ್ಲಿ ತಮ್ಮ ಹಕ್ಕು ಹಾಗೂ ಸ್ವಾತಂತ್ರ‍್ಯವನ್ನು ಪ್ರಾಮಾಣಿಕವಾಗಿ ಉಪಯೋಗಿಸಿಕೊಂಡು ಕರ್ತವ್ಯ ಮಾಡಿದರೆ ಮಾತ್ರ ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಸಾಧ್ಯ. ಭಾರತ ಇಂದು ಎಂತಹ ಆಪತ್ತು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುವಂತಹ ಮನೋಬಲವನ್ನು ಹೊಂದಿದೆ.ಪ್ರತಿಯೊಬ್ಬರೂ ಅವರವರ ಜವಾಬ್ದಾರಿ ಅರಿತುಕೊಂಡು ನಡೆಯಬೇಕು. ಹಾಗಾದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ, ಇಲ್ಲವಾದರೆ ಅರಾಜಕತೆ ಮೂಡುತ್ತದೆ ಎಂದ ಅವರು ಗಣರಾಜ್ಯೋತ್ಸವ ಶುಭ ಕೋರಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ವಿವೇಕ ಶೇಣ್ವಿ, ತಾ.ಪಂ ಇಓ ನಾಗರತ್ನ ನಾಯಕ,ಸಿಪಿಐ ತಿಮ್ಮಪ್ಪ ನಾಯಕ, ಪಿಎಸ್‌ಐ ನವೀನ್ ನಾಯ್ಕ, ಸಂಪತ್ ಕುಮಾರ್, ಪುರಸಭಾ ಅದ್ಯಕ್ಷೆ ಅನುರಾಧಾ ಬಾಳೇರಿ, ಬಿಇಓ ರಾಜೇಂದ್ರ ಭಟ್, ಸಮಾಜ ಕಲ್ಯಾಣಾಧಿಕಾರಿ ಭಾರತಿ ಆಚಾರಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು
ವರದಿ ವಿಶ್ವನಾಥ ಜಿ ನಾಯ್ಕ ಕುಮಟಾ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ