December 22, 2024

Bhavana Tv

Its Your Channel

ಉಚಿತ ಆರೋಗ್ಯ ತಪಾಸಣಾ ಶಿಭಿರ

ಕುಮಟಾ: ಕದಂಬ ಫೌಂಡೇಶನ್ ಶಿರಸಿ,ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಮಟಾ,ಗ್ರಾಮ ಪಂಚಾಯತ ಕಡತೋಕಾ,ನವಿಲಗೋಣ,ಚಂದಾವರ,ಕಡ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಭಿರ ರವಿವಾರ ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿನ ಜನರಿಗೆ ದೂರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಗಳ ಚಿಕಿತ್ಸೆ ಪಡೆಯುವುದು ಕಷ್ಟ ಸಾಧ್ಯ. ಹೀಗಾಗಿ ಇಂತಹ ಶಿಭಿರಗಳನ್ನು ಕೈಗೊಂಡು ಅಲ್ಲಿನ ನುರಿತ ವೈದ್ಯರನ್ನು ನಮ್ಮ ಗ್ರಾಮೀಣ ಭಾಗಕ್ಕೆ ಕರೆಯಿಸಿ ಅವರಿಂದ ಉತ್ತಮ ಚಿಕಿತ್ಸೆ, ಹಾಗೂ ಆರೋಗ್ಯ ಸಲಹೆ ಸಿಗುವಂತಾಗಲಿ ಎಂಬ ಉದ್ದೇಶದಿಂದ ಶಿಭಿರ ಆಯೋಜಿಸಲಾಗಿದೆ.ಇದರಿಂದ ಅನೇಕರಿಗೆ ಅನುಕೂಲ ಆಗಲಿದೆ.ಜೊತೆಗೆ ಇಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಇದರ ಪ್ರಯೋಜನ ಸಾರ್ವಜನಿಕ ಪಡೆದುಕೊಳ್ಳಬೇಕು ನೀಡಿದರು.ಕೆ.ಎಸ್.ಹೆಗ್ಡೆ ಆಸ್ಪತ್ರೆ ನುರಿತ ವೈದ್ಯರುಗಳಾದ ಡಾ:ಬಿನಿಯಮ್ ಕೆ .ಡಾ:ಸೌಮ್ಯ ಸಿಂಗ್.ಡಾ:ಪ್ರಥ್ವಿ ಕೆ ಪಿ. ಡಾ:ರಾಮ್ ಮೋಹನ್ ಭಂಡಾರಿ ಡಾ:ರಾಹುಲ್ ಕುಮಾರ್ ವರಟ್ಟಿ ಹಾಗೂ ಸಿಬ್ಬಂದಿಗಳು

ಈ ವೇಳೆ ನೂರಾರು ಗ್ರಾಮಸ್ಥರು ವೈದ್ಯಕೀಯ ಶಿಭಿರದಲ್ಲಿ ಪಾಲ್ಗೊಂಡು, ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಚಂದಾವರ ಗ್ರಾಮ ಪಂಚಾಯತಿ ಅದ್ಯಕ್ಷೆ ಚಾಯ ಊಭಯಕರ್ ನವಿಲುಗೊಣ ಗ್ರಾಮ ಪಂಚಾಯತಿ ಅದ್ಯಕ್ಷ ಸತೀಶ ಹೆಬ್ಬಾರ ನಾಗರಾಜ ನಾಯಕ ತೊರ್ಕೆ ಗ್ರಾಮ ಪಂಚಾಯತಿ ಸದಸ್ಯೆ ಅಶ್ವಿನಿ ನಾಯ್ಕ ತಾಲ್ಲೂಕು ಅರೋಗ್ಯ ಅಡಳಿತಾದಿಕಾರಿ ಉಷಾ ಹಾಸ್ಯಗಾರ ಪ್ರಾಥಮಿಕ ಆರೋಗ್ಯ ಅದಿಕಾರಿ ಡಾ ಮಂಜುನಾಥ ಎಚ್ ಹಾಗೂ ಮುಖಂಡರುಗಳಾದ ನರಸಿಂಹ ಭಟ್ ಕಡತೊಕಾ ಕಿರಣ ಬಾಡಕರ್ ಚಂದಾವರ ಸಾರ್ವಜನಿಕರು ಮುಂತಾದವರು ಹಾಜರಿದ್ದರು

ವರದಿ : ವಿಶ್ವನಾಥ ಜಿ ನಾಯ್ಕ ಕುಮಟಾ

error: