December 21, 2024

Bhavana Tv

Its Your Channel

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಸೂರಜ್ ನಾಯ್ಕ ಸೋನಿ ನಾಮಪತ್ರ ಸಲ್ಲಿಕೆ

ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಸೂರಜ್ ನಾಯ್ಕ ಸೋನಿ ಅವರು ನಾಮಪತ್ರ ಸಲ್ಲಿಕೆ ಮಾಡಿದು, ಪಟ್ಟಣದ ಜೆಡಿಎಸ್ ಕಛೇರಿಯಿಂದ ಯಾವುದೇ ಅದ್ದೂರಿ, ಅಬ್ಬರ ಆರ್ಭಟ ಇಲ್ಲದೆ ಕಾರ್ಯಕರ್ತರ ಜೋತೆ ಗೂಡಿ ಸರಳವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನಾನು ನಾಮಪತ್ರ ಸಲ್ಲಿಕೆಯನ್ನು ಸಾಂಕೇತಿಕವಾಗಿ ಮಾಡಿದ್ದೇನೆ ಮಾಜಿ ಸಿ.ಎಂ ಕುಮಾರಸ್ವಾಮಿಯವರು 12 ಕುಮಟಾಕ್ಕೆ ಆಗಮಿಸಿ ಬಿ. ಫಾರ್ಮ ನೀಡುವುದರ ಮೂಲಕ ಅಂದು ಕಾರ್ಯಕ್ರಮ ಮಾಡಿದ್ದೇನೆ. ನಾನು ಚೌಕಟ್ಟಿಗೆ ಬೆಲೆ ನೀಡಿ ಅಂದೆ, ಬೃಹತ್ ಪ್ರಮಾಣದ ಕಾರ್ಯಕ್ರಮ ಮಾಡಿದ್ದೇನೆ. ನಾನು 15 ರಿಂದ 20 ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವ ಸಮಾಜ ಸೇವೆ ಕ್ಷೇತ್ರದಲ್ಲಿ ಶ್ರೀ ರಕ್ಷೆಯಾಗಿದೆ. ಕ್ಷೇತ್ರದಲ್ಲಿ ಜನರು ಮನೆ ಮಗನ ರೀತಿಯ ಪ್ರೀತಿಯನ್ನು ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ 2 ಪ್ರಮುಖ ನದಿಗಳು ಹರಿಯುತ್ತಿದ್ದರು, ರೈತರಿಗೆ ನೀರಾವರಿ ಸೌಲಭ್ಯವಿಲ್ಲ, ರೈತರಿಗೆ ಮೀನುಗಾರರಿಗೆ, ಹಾಗೂ ಪ್ರವಾಸೋಧ್ಯಮ ಸರಿಯಾಗಿ ಅಭಿವೃದ್ದಿ ಹೊಂದಿಲ್ಲ. ಕ್ಷೇತ್ರದಲ್ಲಿ ಕಾರ್ಮಿಕ ಕಿಟ್ ಅವ್ಯವಹಾರದಿಂದ ಕೂಲಿ ಕಾರ್ಮಿಕರಿಗೂ ಅನ್ಯಾಯವಾಗಿದೆ. ಕ್ಷೇತ್ರದಲ್ಲಿ ಅನುಕಂಪವಿದೆ, ಈಗಿರುವ ಶಾಸಕರ ದುರಾಡಳಿತ ಹೆಚ್ಚಾಗಿದೆ. ಗ್ರಾಮಪಂಚಾಯತ್‌ನಲ್ಲಿ ಬೇರೆ ಪಕ್ಷದ ಸದಸ್ಯರಿದ್ದರೆ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತಿಲ್ಲ. ಈ ಎಲ್ಲವನ್ನು ಸರಿ ಮಾಡಿ ಜನತೆಗೆ ಸತ್ಯ, ನಾಯ್ಯ, ಧರ್ಮದ ಅಡಿಯಲ್ಲಿ ಜನರ ಸೇವೆ ಮಾಡುತ್ತಾರೆ ಎಂದು ಎಲ್ಲರೂ ಜಾತಿ, ಧರ್ಮ ಮೀರಿನನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಜಿ.ಕೆ.ಪಟಗಾರ, ತಾಲೂಕಾಧ್ಯಕ್ಷರಾದ ಸಿ.ಜಿ.ಹೆಗಡೆ, ಹೊನ್ನಾವರ ತಾಲೂಕಾಧ್ಯಕ್ಷರಾದ ಟಿ.ಟಿ.ನಾಯ್ಕ, ಜೆಡಿಎಸ್ ಕಾರ್ಯಾಧ್ಯಕ್ಷರಾದ ಬಲೀಂದ್ರ ಗೌಡ, ವಕ್ತಾರರಾದ ಸತೀಶ ಮಹಾಲೆ, ಜೆಡಿಎಸ್ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಇಲಿಯಾಸ್, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ರಾಜು ಮಾಸ್ತಿಹಳ್ಳ , ಜೆಡಿಎಸ್ ಮೀನುಗಾರ ವಿಭಾಗದ ಜಿಲ್ಲಾಧ್ಯಕ್ಷರಾದ ಚಿನ್ಮಯ ಅಂಬಿಗ, ಅಜೀತತಾ.ಪಂ ಮಾಜಿ ಸದಸ್ಯರಾದ ಈಶ್ವರ ನಾಯ್ಕ, ಹಳದೀಪುರ ಗ್ರಾ,ಪಂ ಅಧ್ಯಕ್ಷರಾದ ಅಜೀತ ನಾಯ್ಕ, ಮೂರೂರು ಗ್ರಾ.ಪಂ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ, ಕೋಡ್ಕಣಿ ಗ್ರಾ.ಪಂ ಅಧ್ಯಕ್ಷರಾದ ರಾಜೇಶ ಪಟಗಾರ, ಸೇರಿದಂತೆ ಇತರಿದ್ದರು.

error: