December 27, 2024

Bhavana Tv

Its Your Channel

ಹಿರೇಗುತ್ತಿ ಕಾಲೇಜಿನಲ್ಲೊಂದು ಹೃದಯಸ್ಪರ್ಷಿ ಬೀಳ್ಕೊಡುಗೆ

ಕುಮಟಾ ; ಗ್ರಾಮೀಣ ಕ್ಷೇತ್ರದಲ್ಲಿ ಸದ್ದಿಲ್ಲದೆ ಸಾಧನೆ ಮಾಡುತ್ತಿದ್ದ ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿ ಕುಮಟಾದಲ್ಲಿ ಇತ್ತೀಚೆಗೆ ಒಂದು ಅಪರೂಪದ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಅಪಾರ ವಿದ್ಯಾರ್ಥಿಗಳು, ಸ್ನೇಹಿತರು, ಹಿತೈಷಿಗಳು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಉಪನ್ಯಾಸಕರು ಸೇರಿ ಅಭಿಮಾನ ಪೂರ್ವಕವಾಗಿ ಸೇವಾ ನಿವೃತ್ತಿ ಹೊಂದುತ್ತಿರುವ ಪ್ರಾಚಾರ್ಯರಾದ ಶ್ರೀ ಅರುಣ್ ಹೆಗಡೆಯವರನ್ನು ಗೌರವಿಸಿ ಬೀಳ್ಕೊಟ್ಟರು.

1986 ರಿಂದ 31- 5- 2023 ರವರೆಗೆ ಶಿಕ್ಷಣದ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನನ್ಯವಾಗಿ, ಯಶಸ್ವಿಯಾಗಿ ಮೂವತ್ತೇಳು ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ, ಶಿಕ್ಷಕ ತರಬೇತಿ ಸಂಸ್ಥೆಯ ಶಿಕ್ಷಕ ತರಬೇತುದಾರರಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಪ್ರಭಾರ. ಪ್ರೌಢ ಶಾಲಾಮುಖ್ಯಾಧ್ಯಾಪಕರಾಗಿ, ಹೊನ್ನಾವರ ತಾಲೂಕಿನ ಶಾಲಾ ತನಿಖಾಧಿಕಾರಿಯಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಚ್ಚುಮೆಚ್ಚಿನ ಸಮಾಜಶಾಸ್ತ್ರ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ಅರುಣ ಹೆಗಡೆಯವರನ್ನು ಬೀಳ್ಕೊಡಲು ಹಿರೇಗುತ್ತಿ ಕಾಲೇಜಿನಲ್ಲಿ ಇತ್ತೀಚೆಗೆ ಸುಂದರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ವಚ್ಛ ಸುಂದರ ಬದುಕಿನ ದಾರಿ ತೋರಿದ ,ಗುರಿ ಮುಟ್ಟುವ ಮಾರ್ಗದರ್ಶನ ಮಾಡಿದ ಮೌಲ್ಯಗಳ ಮಾದರಿಯಾದ ಅರುಣ್ ಹೆಗಡೆಯವರನ್ನು ಶ್ಲಾಘಿಸುತ್ತ ಕಾಲೇಜಿನ ಹಳೆಯ ಹಾಗೂ ಈಗಿನ ವಿದ್ಯಾರ್ಥಿಗಳು ಭಾವೂಕರಾಗಿ ಮಾತನಾಡಿದರು.

ಬದುಕಿನ ಮೌಲ್ಯಗಳನ್ನು ಸಾರುವ ದಾರಿದೀಪ ಎನ್ನುವ ಫಲಕವನ್ನು ಅನಾವರಣಗೊಳಿಸುತ್ತಾ ಶ್ರೀ ಸಿದ್ದ ವಿನಾಯಕ ಟ್ರಸ್ಟ್ ಮಾದನಗೇರಿ ಧರ್ಮದರ್ಶಿಗಳಾದ ಸುನಿಲ್ ಪೈ ಅವರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಪ್ರಚಾರ ಬಯಸದ ಸ್ಥಿತಿಪ್ರಜ್ಞರಾಗಿ ನಡೆದುಕೊಳ್ಳುವ ಸ್ನೇಹದ ವಲಯವನ್ನು ವಿಸ್ತರಿಸುವ ಅರುಣ್ ಹೆಗಡೆಯವರ ಒಡನಾಟವನ್ನು ಕೊಂಡಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮೋಹನ್ ನಾಯಕ್ ಹಾಗೂ ಮಲ್ಲಿಕಾರ್ಜುನ ಕಾಲೇಜ್ ಸಿದ್ದರ, ಕಾರವಾರ ಇದರ ವಿಶ್ರಾಂತ ಪ್ರಾಚಾರ್ಯರು ಆಗಿರುವಂತಹ ಡಿ ಆರ್ ನಾಯಕ್ ರವರು ಅರುಣ ಹೆಗಡೆಯವರೊಂದಿಗಿನ ಸ್ನೇಹ ಮತ್ತು ಆಡಳಿತಾತ್ಮಕ ನೈಪುಣ್ಯತೆಯನ್ನು ಮನಸಾರೆ ಬಣ್ಣಿಸಿ ಸನ್ಮಾನಿಸಿದರು.
ಬ್ರಹ್ಮ ಜಟಕ ಯುವಕ ಸಂಘ ಹಿರೇಗುತ್ತಿ ಇದರ ಅಧ್ಯಕ್ಷರಾದ ಜಗದೀಶ ನಾಯಕ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಮು ಕೆಂಚನ್, ಸೆಕೆಂಡರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ರೋಹಿದಾಸ್ ಗಾಂವ್ಕರ್ ರವರು ಅರುಣ ಹೆಗಡೆಯವರನ್ನು ಸನ್ಮಾನಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಭಾರ ಸ್ವೀಕರಿಸಿದ ಉಪನ್ಯಾಸಕರಾದ ನಾಗರಾಜ ಗಾಂವ್ಕರ್ ಮತ್ತು ಉಪನ್ಯಾಸಕಿ ಶ್ರೀಮತಿ ಸುಜಾತ ನಾಯಕ್ ಅರುಣ ಹೆಗಡೆಯವರೊಂದಿಗಿನ ಸೇವಾ ಜೀವನದ ಮಧುರ ಕ್ಷಣ, ಶಿಸ್ತುಪರತೆ, ಆಡಳಿತ ನೈಪುಣ್ಯತೆಯ ಬಗ್ಗೆ ಭಾವಪೂರ್ಣವಾಗಿ ತಮ್ಮ ಅನುಭವಗಳನ್ನು ಹಂಚಿಕೊAಡರು. ನಿಕಟಪೂರ್ವ ಪ್ರಾಂಶುಪಾಲರಾದ ಪ್ರೇಮಾನಂದ್ ಗಾಂವ್ಕರ್ ರವರು ಅರುಣ್ ಹೆಗಡೆಯವರ ಶಿಸ್ತು ಬಧ್ಧ ಜೀವನ ಕ್ರಮ, ಕಾಲೇಜಿನ ಕಾಳಜಿಯ ಪ್ರಜ್ಞೆಯನ್ನು ಮನಸಾರೆ ಬಣ್ಣಿಸಿ ಶುಭ ಕೋರಿದರು. ಹಾಗೂ ಈ ವರ್ಷದ ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಹಿರೇಗುತ್ತಿ ಊರಿನ ನಾಗರಿಕರ ಸ್ನೇಹ ಭಾವವನ್ನು ಉಲ್ಲೇಖಿಸುತ್ತಾ ಕಾಲೇಜಿನ ಅಭ್ಯುತ್ಥಾನದಲ್ಲಿ ಕೈಜೋಡಿಸುವ ಇಲ್ಲಿನ ಮುಖಂಡರ ತತ್ಪರತೆಯನ್ನು ನೆನಪಿಸಿಕೊಳ್ಳುತ್ತಾ ಜಿ.ಪಂ ಉತ್ತರ ಕನ್ನಡದ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರ ಬಾವಿಯವರು ಶಿಕ್ಷಣದ ಬೇರೆಬೇರೆ ಮಜಲುಗಳ ಅನುಭವಗಳನ್ನು ಪಡೆದು ಇಲ್ಲಿ ಕಾರ್ಯರೂಪಕ್ಕೆ ತಂದ ಅರುಣ್ ಹೆಗಡೆಯವರ ಸಾಮಾಜಿಕ ಶೈಕ್ಷಣಿಕ ಕಾಳಜಿಯನ್ನು ಪ್ರಶಂಸಿಸಿ ಶುಭ ಕೋರಿದರು. ಅರುಣ್ ಹೆಗಡೆಯವರೊಂದಿಗಿನ ವೃತ್ತಿ ಜೀವನದ ಅಚಲ ಕ್ಷಣಗಳನ್ನು ಸ್ಮರಿಸಿಕೊಂಡವರು ಸಿಟಿಇ ಬೆಳಗಾಂವ್ ಇದರ ರೀಡರ್ ನಾಗರಾಜ್ ನಾಯಕರವರು.
ಪದವಿಪೂರ್ವ ಕಾಲೇಜಿನ ಸ್ಥಾಪನೆ, ಹೊಂದಿರುವ ಯೋಜನೆ, ಹಿರೇಗುತ್ತಿ ಊರಿನ ಗಣ್ಯ ನಾಗರಿಕರ ಕೊಡುಗೆ ಇವುಗಳನ್ನೆಲ್ಲ ಉಲ್ಲೇಖಿಸಿ ಅವುಗಳನ್ನೆಲ್ಲ ಸಮನ್ವಯಗೊಳಿಸಿದ ಕಾಲೇಜಿನ ಪ್ರಾಚಾರ್ಯರಾದ ಅರುಣ ಹೆಗಡೆಯವರ ಸೃಜನ ಶಕ್ತಿಗಳನ್ನು ಬಾಯ್ತುಂಬಾ ಬಣ್ಣಿಸಿದ ಹೊನ್ನಪ್ಪ ನಾಯಕ, ಮಾಜಿ ಅಧ್ಯಕ್ಷರು ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಜಿ.ಪಂ. ಉತ್ತರ ಕನ್ನಡ ಇವರು ಸರಕಾರಿ ವ್ರತ್ತಿಯ ಜೊತೆಗೆ ಹಲವು ಹಲವು ಸಾಮಾಜಿಕ ಸಂಘ-ಸAಸ್ಥೆಗಳಲ್ಲಿ ತನುಮನ ಧನಗಳಿಂದ ತಮ್ಮನ್ನು ಅರ್ಪಿಸಿಕೊಂಡ ಸಜ್ಜನಿಕೆಯ ವ್ಯಕ್ತಿ ಅಂದರೆ ಅರುಣ ಹೆಗಡೆಯವರು ಎಂದರು.

ಬೆಳಕು ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು, ಯುವ ಉದ್ಯಮಿ ಶಿವಕುಮಾರ ಕೌರಿಯವರು ಉಪಸ್ಥಿತರಿದ್ದು ಶುಭ ಕೋರಿದರು. ಧರ್ಮ ಪತ್ನಿ ಶ್ರೀಮತಿ ಅನ್ನಪೂರ್ಣ ಹೆಗಡೆಯವರೊಂದಿಗೆ ಸನ್ಮಾನ ಸ್ವೀಕರಿಸಿದ ಅರುಣ ಹೆಗಡೆಯವರು 17 ವರ್ಷಗಳ ಹಿರೇಗುತ್ತಿ ಕಾಲೇಜಿನ ಸ್ನೇಹ ಪರಿಸರಕ್ಕೆ ಕೃತಜ್ಞತೆ ಸಲ್ಲಿಸಿ, ತಮ್ಮ ಹಳೆಯ ವಿದ್ಯಾರ್ಥಿಗಳ ಪ್ರೀತಿಯನ್ನು, ಸಹೋದ್ಯೋಗಿ ಉಪನ್ಯಾಸಕರ ಸಹಕಾರ ಮತ್ತು ಬಾಂಧವ್ಯವನ್ನು ಮನಸ್ವಿ ಸ್ಮರಿಸಿ ಎಲ್ಲರ ಉಪಸ್ಥಿತಿ ಮತ್ತು ಉಪಕಾರಕ್ಕೆ ಅಭಿಮಾನದಿಂದ ತಲೆಬಾಗಿದರು.
ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ ಸ್ವಾಗತ ಗೀತೆ ಮತ್ತು ಶುಭಾಶಯ ಗೀತೆ ಹಾಡಿದರು.
ಉಪನ್ಯಾಸಕಿ ಶ್ರೀಮತಿ ಶಾರದಾ ನಾಯಕ್ ಇವರು ಸ್ವಾಗತಿಸಿದರು. ಶ್ರೀಮತಿ ನೇತ್ರಾವತಿ ನಾಯಕ್ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಸೀಮಾ ಪಟಗಾರ ವಂದಿಸಿದರು. ರಮೇಶ್ ಗೌಡ ಕನ್ನಡ ಉಪನ್ಯಾಸಕರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾರಂಭದಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರುಗಳು, ಸೆಕೆಂಡರಿ ಪ್ರೌಢಶಾಲೆಯ ಶಿಕ್ಷಕರುಗಳು, ಊರ ನಾಗರಿಕರು ಹಾಜರಿದ್ದರು.

error: