ಕುಮಟಾ; ಅಪಘಾತದಲ್ಲಿ ಸಂಪೂರ್ಣವಾಗಿ ಒಂದು ಕಾಲು ಕಳೆದು ಕೊಂಡ ಕೆಕ್ಕಾರನ ಹಾಲಕ್ಕಿ ಸಮಾಜದ ಜಟ್ಟು ಗಿರಿಯಾ ಗೌಡ ರವರಿಗೆ ಪರಿವರ್ತನ ಟ್ರಸ್ಟ್ (ರಿ) ಗೋಕರ್ಣ ದ ಮೆನೇಜಿಂಗ್ ಟ್ರಸ್ಟಿ ಉದ್ಯಮಿ ಗೋವಿಂದ ಗೌಡರವರು ಮಾನವೀಯ ನೆಲೆಯಲ್ಲಿ 30 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು. ಕೆಲವು ದಿನಗಳ ಹಿಂದೆ ಕೂಲಿ ಕೆಲಸಕ್ಕೆ ಎಂದು ಹೋಗಿದ್ದ 23 ವರ್ಷದ ಜಟ್ಟು ಗಿರಿಯ ಗೌಡ ಅಂಕೋಲಾದಲ್ಲಿ ಅಪಘಾತಕ್ಕೆ ತುತ್ತಾಗಿ ತಮ್ಮ ಒಂದು ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ದುಡಿಯುವ ಮಗನ ಚಿಕಿತ್ಸೆಗಾಗಿ ಕುಟುಂಬವು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದರು. ಈ ವಿಷಯವನ್ನು ತಿಳಿದುಕೊಂಡ ಗೋವಿಂದ ಗೌಡರು ಅವರ ಮನೆಗೆ ಭೇಟಿ ನೀಡಿ ಕುಟುಂಬದ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ಟ್ರಸ್ಟ್ ನಿಂದ 30000 ರೂಪಾಯಿ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ದುಡಿಮೆಯ ಒಂದಿಷ್ಟು ಪಾಲು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ , ಆರೋಗ್ಯ ಸೇವೆಗೆ ನಿಸ್ವಾರ್ಥ ಮನೋಭಾವ ದಿಂತದ ಸಹಾಯ ಮಾಡುತಿದ್ದೆ. ಇನ್ನು ಮುಂದೆ ಅದನ್ನು ನಮ್ಮ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಮೂಲಕ ಮುಂದುವರಿಸುತ್ತಿದ್ದೇನೆ. ಮುಂದಿನ ದಿನದಲ್ಲಿ ಇವರಿಗೆ ಮಂಗಳೂರಿಗೆ ಚಿಕಿತ್ಸೆಗೆ ಹೋಗಿಬರಲು ವಾಹನದ ವೆಚ್ಚ ಬರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪರಿವರ್ತನ ಟ್ರಸ್ಟ್ ನ ಟ್ರಸ್ಟಿಗಳಾದ ಡಾ. ಶ್ರೀಧರ್ ಗೌಡ ಉಪ್ಪಿನ ಗಣಪತಿ, ಸುಧೀರ್ ಪಿಶಿಪಾಟಿ, ಉದ್ಯಮಿ ಮಂಜುನಾಥ ಪಟಗಾರ, ಫಲಾನುಭವಿಯ ಪಾಲಕರ ಗಿರಿಯ ಜಟ್ಟು ಗೌಡ, ಸ್ಥಳೀಯರಾದ ಕುಪ್ಪು ಗೌಡ, ಜಂಗಾ ಗೌಡ, ಹಾಲಕ್ಕಿ ಯುವ ಜಾಗೃತಿ ಸಂಘ. ಕೆಕ್ಕಾರ ಇದರ ಅಧ್ಯಕ್ಷರಾದ ಸುಕ್ರು ಗೌಡ, ಪದಾಧಿಕಾರಿಗಳಾದ ಹರಿಶ್ಚಂದ್ರ ಗೌಡ, ವಕೀಲ ಕೃಷ್ಣ ಗೌಡ, ಸಮಾಜದ ಮುಖಂಡರಾದ ಬಲೀಂದ್ರ ಗೌಡ, ವಿಷ್ಣು ಗೌಡ, ಗಣಪತಿ ಗೌಡ, ಗಣೇಶ ಗೌಡ, ದೇವಾನಂದ ಗೌಡ, ಸದಾನಂದ ಗೌಡ ಉಪಸ್ಥಿತರಿದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ