ಕ್ರೀಡಾಕೂಟದಿ0ದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗಲಿದೆ- ಶಾಂತಾ ನಾಯಕ
ಕುಮಟಾ: “ಕ್ರೀಡೆಯು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಲು ಪೂರಕವಾಗಿದೆ. ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಲು ಪ್ರೇರೇಪಿಸುತ್ತದೆ.” ಎಂದು ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ಹೇಳಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ 2023-24ರ ಜಿಲ್ಲಾಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. “ಸದೃಢ ದೇಹದಲ್ಲಿ ಸದೃಢ ಮನಸ್ಸನ್ನೂ ಹುಟ್ಟು ಹಾಕುವುದೇ ಶಿಕ್ಷಣ, ಹಿರೇಗುತ್ತಿ ಹೈಸ್ಕೂಲ್‌ನವರು ಅತೀ ಅಚ್ಚುಕಟ್ಟಾಗಿ ಕ್ರೀಡಾಕೂಟ ಸಂಘಟಿಸಿದ್ದಾರೆ ಕ್ರೀಡಾಕೂಟ ಯಶಸ್ವಿಯಾಗಲಿ” ಎಂದು ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾ ಎನ್ ನಾಯಕ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದರು. “ದೈಹಿಕ ಚಟುವಟಿಕೆಗಳಿಂದಾಗಿ ದೈಹಿಕ ಸಧÀÈಡತೆ ದೊರಕುವುದಲ್ಲದೆ ಬುದ್ಧಿಯೂ ವಿಕಾಸಗೊಳ್ಳುವುದು. ಅದಕ್ಕಾಗಿ ಕ್ರೀಡಾಕೂಟ ನಡೆಸಲು ಯೋಜಕರು ಅತೀ ಮುಖ್ಯ ಯೋಜಕರಿಂದ ಕ್ರೀಡಾಕೂಟ ಯಶಸ್ವಿಯಾಗುತ್ತದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ್ ಮಾತನಾಡಿ “ಜೀವನದುದ್ದಕ್ಕೂ ಆರೋಗ್ಯಕರ ದೈಹಿಕ ಚಟುವಟಿಕೆಗಳನ್ನು ಅನುಭವಿಸಲು ಅಗತ್ಯ ಜ್ಞಾನ, ಕೌಶಲ್ಯ ಹಾಗೂ ದಿಟ್ಟತನವುಳ್ಳ ದೈಹಿಕವಾಗಿ ಸುರಕ್ಷಿತ ವ್ಯಕ್ತಿಗಳನ್ನು ರೂಪಿಸಲು ಶಾಲೆಯಲ್ಲಿ ನಡೆಯುವ ಇಲಾಖಾ ಕ್ರೀಡಾಕೂಟಗಳು ಸಹಾಯಕವಾಗಿದೆ” ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ದೈಹಿಕಶಿಕ್ಷಣ ಶಿಕ್ಷಣಾಧಿಕಾರಿಗಳಾದ ಶಿವಾನಂದ ನಾಯಕ “ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಕ್ರೀಡೆ ಸಹಕಾರಿಯಾಗಿದೆ” ಎಂದರು.
ದೈಹಿಕ ಶಿಕ್ಷಕ ನಾಗರಾಜ ನಾಯಕ ಕಾರ್ಯಕ್ರಮ ಸಂಘಟಿಸಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ, ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ ಬಿ ಕೆರೆಮನೆ, ಸದಸ್ಯ ಎನ್.ಟಿ.ನಾಯಕ, ರಮಾನಂದ ಪಟಗಾರ ಹಾಗೂ ಹಿರೇಗುತ್ತಿ ಕಾಲೇಜ್ ಪ್ರಿನ್ಸಿಪಾಲ್ ನಾಗರಾಜ ಗಾಂವಕರ, ಉದ್ದಂಡ ಗಾಂವಕರ, ಉಮೇಶ ಗಾಂವಕರ, ಸಣ್ಣಪ್ಪ ನಾಯಕ, ಕಾರವಾರ ದೈಹಿಕ ಪರಿವೀಕ್ಷಕ ಪ್ರಕಾಶ ನಾಯಕ ಉಪಸ್ಥಿತರಿದ್ದರು.
ಕಾರ್ಯಕ್ರಮ ಚೈತನ್ಯ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಹಿರೇಗುತ್ತಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಶಿವಪ್ರಸಾದ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ಕುಮಟಾ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಜಿ.ನಾಯಕ ಸರ್ವರನ್ನೂ ವಂದಿಸಿದರು.
ಬಾಲಕರ ವಾಲಿಬಾಲ್ ಆಟದಲ್ಲಿ ಪ್ರಥಮ ಕುಮಟಾ ತಾಲೂಕಿನ ಜನತಾ ವಿದ್ಯಾಲಯ ಬಾಡ, ರನ್ನರ್ ಅಫ್ ಜನತಾ ವಿದ್ಯಾಲಯ ಕಡತೋಕಾ ಹೊನ್ನಾವರ. ಬಾಲಕಿಯರ ವಾಲಿಬಾಲ್ ಆಟದಲ್ಲಿ ಪ್ರಥಮ ಹೊನ್ನಾವರ ತಾಲೂಕಿನ ಆರೋಗ್ಯಮಾತಾ ಹೈಸ್ಕೂಲ್ ಗುಂಡಬಾಳ, ರನ್ನರ್ ಅಫ್ ಯುನಿಯನ್ ಹೈಸ್ಕೂಲ್ ಮಾಜಾಳಿ ಕಾರವಾರ ಜಯಶಾಲಿಯಾಗಿದ್ದಾರೆ. ನಿರ್ಣಾಯಕರಾಗಿ ತಿಮ್ಮಪ್ಪ ನಾಯ್ಕ ಚೆಂಡಿಯಾ, ಎಮ್.ಎಸ್.ದೊಡ್ಮನಿ ಹೆಗಡೆ, ವಿನೋದ ನಾಯಕ, ದಯಾನಂದ ಗೌಡ, ಕೆ.ಎನ್.ನಾರಾಯಣ ಸ್ವಾಮಿ, ಮಹೇಶ ಶೆಟ್ಟಿ, ವಿಶಾಲ ನಾಯಕ ಭಾವಿಕೇರಿ ಕಾರ್ಯನಿರ್ವಹಿಸಿದರು. ಹಿರೇಗುತ್ತಿ ಎಲ್ಲಾ ಹೈಸ್ಕೂಲ್ ಶಿಕ್ಷಕ ವೃಂದದವರು, ತಾಲೂಕಿನ ದೈಹಿಕ ಶಿಕ್ಷಕರು ಊರ ನಾಗರಿಕರು ಹಾಜರಿದ್ದರು.
ವರದಿ: ಎನ್ ರಾಮು ಹಿರೇಗುತ್ತಿ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ