March 27, 2025

Bhavana Tv

Its Your Channel

ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ

ಕುಮಟಾ: ಜೆಡಿಎಸ್ ಮುಖಂಡ ಇನಾಯತ್ ಉಲ್ಲಾ ಶಾಬಂದ್ರಿಯವರು ಕುಮಟಾದಲ್ಲಿ ನಡೆದ ಪ್ರಜಾಧ್ವನಿ- ೨ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಸಿಎಂ- ಡಿಸಿಎಂ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಇನಾಯತ್ ಉಲ್ಲಾ ಶಾಬಂದ್ರಿಯವರು ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದು, ಈ ಹಿಂದೆ ಚುನಾವಣೆಗೂ ಸ್ಪರ್ಧಿಸಿದ್ದರು. ಭಟ್ಕಳದ ಮುಸ್ಲಿಂ ಸಮುದಾಯದ ಪರಮೋಚ್ಚ ಸಂಸ್ಥೆ ತಂಜೀAನ ಅಧ್ಯಕ್ಷರೂ ಆಗಿರುವ ಅವರು, ಜೆಡಿಎಸ್‌ನಲ್ಲಿನ ಬೆಳವಣಿಗೆ ಕಂಡು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇನಾಯತ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್ ಸಾಕು. ತೆನೆ ತಂದ ಮಹಿಳೆಯನ್ನ ರಸ್ತೆಗೆ ಬಿಟ್ಟು ಬಿಜೆಪಿ ಸೇರಿದ್ದಾರೆ. ಈ ಹಗರಣವನ್ನೆಲ್ಲ ನೋಡಿ ಸಾಕು ಸಾಕೆನಿಸಿತು ಎಂದಿದ್ದಾರೆ ಎಂದರು.

ಕುಮಾರಸ್ವಾಮಿಯವರು ನಮ್ಮ ಹೆಣ್ಣುಮಕ್ಕಳು ಗ್ಯಾರಂಟಿಯಿ0ದ ದಾರಿ ತಪ್ಪಿದ್ದಾರೆ ಎಂದಿದ್ದಾರೆ. ಹೀಗೆ ಹೇಳಿದ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಉತ್ತರ ಕೊಡಬೇಕೆಂದು ಜೆಡಿಎಸ್ ತೊರೆದು ಇನಾಯತ್ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಸ್ವಾಗತಿಸುತ್ತೇನೆ. ಅವರ ಬೆಂಬಲಿಗರನ್ನೂ ಸ್ವಾಗತಿಸುತ್ತೇನೆ ಎಂದರು.

error: