May 8, 2024

Bhavana Tv

Its Your Channel

ನೇತ್ರಾಣಿ ಅಡ್ವೆಂಚರ್ಸ್ ಮುರುಡೇಶ್ವರ ಇವರ ಆಶ್ರಯದಲ್ಲಿ ೧೦ಮೀಟರ್ ಆಳದಲ್ಲಿ ೨೦ ಅಡಿ ಉದ್ದದ ಕನ್ನಡದ ಬಾವುಟ ಪ್ರದರ್ಶನ

ಭಟ್ಕಳ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ಮುರ್ಡೇಶ್ವರದ ನೇತ್ರಾಣಿ ಅಡ್ವಂಚರ್ಸ ಅವರು ಮುರ್ಡೇಶ್ವರದ ನೇತ್ರಾಣಿ ಗುಡ್ಡದ ಬಳಿ ಸಮುದ್ರದ ೧೦ಮೀಟರ್ ಆಳದಲ್ಲಿ ೨೦ ಅಡಿ ಉದ್ದದ ಕನ್ನಡದ ಬಾವುಟವನ್ನು ಪ್ರದರ್ಶಿಸುವ ಮೂಲಕ ಈ ಬಾರಿಯ ರಾಜ್ಯೋತ್ಸವವನ್ನು ವಿಶಿಷ್ಟ ಮತ್ತು ವಿಭಿನ್ನವಾಗಿ ಆಚರಿಸಿದರು.

೨೦೨೧ರ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬೇಕು ಎಂದು ನೇತ್ರಾಣಿ ಎಡ್ವಂಚರ್ಸನ ಗಣೇಶ ಹರಿಕಾಂತ ವಿಶಿಷ್ಟ ಯೋಜನೆಯೊಂದನ್ನು ಹಮ್ಮಿಕೊಂಡಿದ್ದರು. ಭೋಮಿಯ ಕೆಳಗೆ ಅದು ನೇತ್ರಾಣಿ ಗುಡ್ಡದಲ್ಲಿ ಸಮುದ್ರದ ಗರ್ಭದಲ್ಲಿ ಸುಮಾರು ೧೦ಮೀಟರ್ ಕೆಳಗೆ ಕನ್ನಡದ ಪತಾಕೆಯನ್ನು ಪ್ರದರ್ಶಿಸಬೇಕು ಎಂದು ಆಶಯ ಹೊಂದಿದ್ದರು. ಅವರದೆ ಸಂಸ್ಥೆಯ ಅನೀಶ ದುರ್ಗೇಕರ, ನವೀನ ಕಾರವಾರ ಹಾಗೂ ಬೆಂಗಳೂರಿನ ಮೂಲದ ಐವರು ಪ್ರವಾಸಿಗರೊಂದಿಗೆ ನ.೧ರಂದು ನೇತ್ರಾಣಿ ಗುಡ್ಡದ ಬಳಿ ತೆರಳಿದ್ದಾರೆ. ಸುಮಾರು ೨೦ಅಡಿ ಉದ್ದದ ಕನ್ನಡದ ಧ್ವಜವನ್ನು ಹಿಡಿದು ನೀರಿನಲ್ಲಿ ಧುಮುಕಿ ಅದನ್ನು ಸುಮಾರು ೨೭ ನಿಮಿಷಗಳ ವರೆಗೆ ಸಮುದ್ರದ ಆಳದಲ್ಲಿ ಪ್ರದರ್ಶನ ನೀಡಿದ್ದಾರೆ. ಸಮುದ್ರದ ಏರಿಳಿತದ ನಡುವೆಯೂ ಸಂಪೂರ್ಣ ಧ್ವಜವನ್ನು ಪ್ರದರ್ಶಿಸಿಸಿದ ಗಣೇಶ ಹರಿಕಾಂತ ಹಾಗೂ ಅವರ ತಂಡದ ಸಾಹಸಕ್ಕೆ ಕನ್ನಡಿಗರಿಂದ ಮೆಚ್ಚುಗೆ ಪೂರವೆ ಹರಿದುಬಂದಿದೆ.
ಒಶಿಯನ್ ಪರ್ಲ ತಂಡದವರು ಕೂಡ ಸಮುದ್ರದ ಮೇಲೆ ತಮ್ಮದೆ ಸ್ಪೀಡ್ ಬೋಟಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಬೀಸುವ ಗಾಳಿಯ ನಡುವೆಯೂ ದೋಣೀಯ ಮುಂಬಾಗದಲ್ಲಿ ಕನ್ನಡದ ಪತಾಕೆಯನ್ನು ಹಾರಿಸುವ ಮೂಲಕ ಸಮುದ್ರದ ಮೇಲೆ ರಾಜ್ಯೋತ್ಸವವನ್ನು ಆಚರಿಸಿಕೊಂಡಿದ್ದಾರೆ.

error: