May 4, 2024

Bhavana Tv

Its Your Channel

ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟ ; ಆರ್.ಎನ್.ಶೆಟ್ಟಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುರುಡೇಶ್ವರ:- ಆರ್.ಎನ್.ಶೆಟ್ಟಿ ಪಿ.ಯು ಕಾಲೇಜಿನಲ್ಲಿ 2021-22 ರಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು. ಅದರಲ್ಲಿ ಒಟ್ಟು ಪರೀಕ್ಷೆಯಲ್ಲಿ ಕುಳಿತ 110 ವಿದ್ಯಾರ್ಥಿಗಳಲ್ಲಿ 99 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.90%, ರಷ್ಟು ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ಶೇ.76.% ವಾಣಿಜ್ಯ ವಿಭಾಗದಲ್ಲಿ ಶೇ.95.%ರಷ್ಟು ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.85.% ರಷ್ಟು ಫಲಿತಾಂಶ ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿs ಸುಹಾಸಕುಮಾರ 582 ಅಂಕಗಳನ್ನು ಪಡೆದು ಶೇ.97%, ಕು.ದೀಕ್ಷಾ ನಾಯ್ಕ 551 ಅಂಕಗಳನ್ನು ಪಡೆದು ಶೇ.91.83% ಕು.ದೀಪ್ತಿ ನಾಯ್ಕ 550 ಅಂಕಗಳನ್ನು ಪಡೆದು ಶೇ.91.67% ಹಾಗೂ ವಾಣಿಜ್ಯ ವಿಭಾಗದಲ್ಲಿ ಕು.ನಾಗವೇಣಿ ಗೌಡ 577 ಅಂಕ ಪಡೆದು ಶೇ.96.17% ಹಾಗೂ ಕು. ನಾಗಶ್ರೀ ನಾಯ್ಕ 566 ಅಂಕಗಳನ್ನು ಪಡೆದು ಶೇ.94.33% ಕು.ಸಹನಾ ವಿ ಮೊಗೇರ 550 ಅಂಕಗಳನ್ನು ಪಡೆದು ಶೇ.91.67%ರಷ್ಟು ಕಲಾ ವಿಭಾಗದಲ್ಲಿ ಕು. ಸುಬ್ರಹ್ಮಣ್ಯ ನಾಯ್ಕ 463 ಅಂಕಗಳನ್ನು ಪಡೆದು ಶೇ.77.17%, ಕು.ಮಾಲತಿ ನಾಯ್ಕ 453 ಅಂಕಗಳೊAದಿಗೆ ಶೇ.75.5% ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ, ವಿಜ್ಞಾನ ವಿಭಾಗದಲ್ಲಿ ಸುಹಾಸಕುಮಾರ ಮತ್ತು ದಿವ್ಯಾ ನಾಯ್ಕ ಇವರು ಗಣಿತ ವಿಷಯದಲ್ಲಿ ಮತ್ತು ಕು. ಪ್ರಕೃತಿ ನಾಯಕ್ ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ ಕು. ನಾಗವೇಣಿ ಗೌಡ ಇವಳು ಲೆಕ್ಕ ಶಾಸ್ತç, ಕನ್ನಡ, ಗಣಕವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾಳೆ. ಇವರನ್ನು ನಮ್ಮ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿವೃಂದವರು ಅಭಿನಂದಿಸಿದ್ದಾರೆ.

error: