May 6, 2024

Bhavana Tv

Its Your Channel

ಭಾವೈಕ್ಯತೆ ಹರಿಕಾರ ಇಬ್ರಾಹಿಂ ಸುತಾರ ಹಾಗೂ ಗಾನಕೋಗಿಲೆ ಲತಾ ಮಂಗೇಶ್ಕರವರಿಗೆ ಶ್ರದ್ದಾಂಜಲಿ

ವರದಿ: ವೇಣುಗೋಪಾಲ ಮದ್ಗುಣಿ

ಸಿರಸಿ:”ಮಾನವತಾವಾದಿ ಶ್ರೇಷ್ಠ ಸೂಫಿ ಸಂತನಾಗಿ ನುಡಿದಂತೆ ಬದುಕಿ ತೋರಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರರವರು. ಇಂಥ ಮಹನೀಯರಿರುವ ಕಾಲಘಟ್ಟದಲ್ಲಿ ನಾವು ಇದ್ದೇವೆ ಎನ್ನುವುದೇ ನಮಗೊಂದು ಹೆಮ್ಮೆಯ ಸಂಗತಿ.” ಹಾಗೂ “36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡಿಗಳಿಂದ 7 ದಶಕಗಳ ಕಾಲ ಸಂಗೀತ ಸಾಮ್ರಾಜ್ಞಿಯಾಗಿ ಮೆರೆದು ತನ್ನ ಸುಸ್ವರದಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಭಾರತ ರತ್ನ ಲತಾ ಮಂಗೇಶ್ಕರರವರು ಚಿರಸ್ಮರಣೀಯರು. ಅವರ ಅಗಲಿಕೆ ನಮಗೆಲ್ಲ ಬೇಸರವಾಗಿದೆ ಆದರೂ ಭಾರತ ಮಾತೆಯ ಇಂಥ ಅಪೂರ್ವ ರತ್ನಗಳನ್ನು ನೋಡುವ ಸೌಭಾಗ್ಯ ನಮ್ಮದಾಗಿದ್ದು ಬಹುಜನ್ಮದ ಪುಣ್ಯ” ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷೆ ಶಾಲಿನಿ ರುದ್ರಮುನಿ ನುಡಿದರು.
“ತಮ್ಮ ಮನೆಗೆ “ಭಾವೈಕ್ಯ ನಿಲಯ” ಎಂಬ ಹೆಸರನ್ನಿಟ್ಟು ಭಾರತದ ಮೂಲ ನೆಲೆಗಟ್ಟಿನ ಅಧ್ಯಯನ ಮಾಡಿ, ಧರ್ಮಗ್ರಂಥಗಳ ಸಾರವನ್ನು ಪ್ರವಚನಗಳ ಮೂಲಕ ಹೃದಯ ತಟ್ಟುವಂತೆ ತಿಳಿಸುತ್ತ ಏಕತೆಯನ್ನು ಸಾಧಿಸುವಲ್ಲಿ ಸಫಲರಾಗಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಕನ್ನಡದ ಕಬೀರರೆಂದೆ ಖ್ಯಾತರಾಗಿದ್ದರು. ಮತ್ತು ಗಾನ ಮಾಧುರ್ಯಕ್ಕೆ ಹೆಸರಾದ ಲತಾ ದೀದಿ ವಿಶ್ವ ಕಂಡ ಅಪರೂಪದ ಸಾಧಕಿ. ಎರಡು ಅನರ್ಘ್ಯ ರತ್ನಗಳನ್ನು ಕಳೆದುಕೊಂಡಿದ್ದು ತುಂಬಾ ದುಃಖ ತಂದಿದೆ” ಎಂದರು.ಕೇAದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕ ಶಿರಸಿ ಹಾಗೂ ಜಿಲ್ಲಾ ಘಟಕ ಉತ್ತರ ಕನ್ನಡದ ಸಂಯುಕ್ತಾಶ್ರದಯದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಹಾಗೂ ಅಗಲಿದ ಗಾನ ಕೋಗಿಲೆ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಪುರಸ್ಕೃತೆ ಲತಾ ಮಂಗೇಶ್ಕರ್ ಅವರಿಗಾಗಿ ಗೂಗಲ್ ಮೀಟನಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮವನ್ನುದ್ದೇಶಿಸಿ ಗಣ್ಯರು ಮಾತನಾಡುತ್ತಿದ್ದರು.
ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣ ಪದಕಿಯವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮತ್ತು ಸಾಹಿತ್ಯ ವಲಯದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ನುಡಿಗಳ ಮೂಲಕ, ಕವನಗಳ ಮೂಲಕ, ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಸಾಹಿತಿ ಗಣ್ಯರುಗಳಾದ ಹಳಿಯಾಳದ ಭಾರತಿ ನಲವಡೆ, ಶಿರಸಿಯ ಮಹೇಶಕುಮಾರ ಹನಕೆರೆ, ರಾಜು ಉಗ್ರಾಣಕರ, ಬೈಲಹೊಂಗಲನ ಅಮ್ಜವ್ವಾ ಭೋವಿ, ದಾಂಡೇಲಿಯ ದೀಪಾಲಿ ಸಾಮಂತ, ಕು ಶ್ರದ್ಧಾ ಸಾಮಂತ, ದುಬೈನಿಂದ ಯಶೋಧ ಭಟ್ಟ, ಬೆಂಗಳೂರಿನ ಕಮಲಾಕ್ಷಿ ಕೌಜಲಗಿ, ಮುಂಡಗೋಡಿನ ಭಾಲಚಂದ್ರ ಭಟ್, ಪೂನಾದ ಶರಣಬಸಪ್ಪ ಕುಂಬಾರ, ಯಲ್ಲಾಪುರದ ಸವಿತಾ ಎಸ್.ಜಿ, ಡಾ.ಶೈಲೇಶ ಮಾದಣ್ಣವರ , ಆಶಾ ಶೆಟ್ಟಿ, ಸಿಂಚನಾ ಶೆಟ್ಟಿ, ಪ್ರಭಾ ಜಯರಾಜ, ಸುನಂದ ಪಾಠಣಕರ ಮುಂತಾದವರು ಪಾಲ್ಗೊಂಡು ಕಾರ್ಯಕ್ರಮ ಅರ್ಥಪೂರ್ಣಗೊಳ್ಳಲು ಕಾರಣರಾದರು.
ಕೃಷ್ಣ ಪದಕಿಯವರು ವಿಷಯ ಪ್ರಸ್ತುತಿಯೊಂದಿಗೆ ಗಣ್ಯರನ್ನು ಸ್ವಾಗತಿಸಿದರು.

error: