May 4, 2024

Bhavana Tv

Its Your Channel

ಶಿರಸಿಯಲ್ಲಿ ಪ್ರಜ್ವಲ ಟ್ರಸ್ಟ್ ಉದ್ಘಾಟನೆ

ಶಿರಸಿ:ಆಧ್ಯಾತ್ಮ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಜ್ವಲ ಟ್ರಸ್ಟನ್ನು ಉದ್ಘಾಟನೆಗೊಳಿಸಲಾಯಿತು. ರಾಘವೇಂದ್ರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಸಹಸ್ರ ಮೋದಕ ಹವನ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಸುಧಾ ಶರ್ಮ ಸಾಗರ ಹಾಗೂ ವೃಂದದವರಿAದ ವಿಭಿನ್ನ ರೀತಿಯ ಸಂಗೀತ ಕಾರ್ಯಕ್ರಮ ಜನಮಾನಸ ಗೆದ್ದಿತು. ಹಾರ್ಮೋನಿಯಂ ಸಾತ್ ಸತೀಶ್ ಹೆಗ್ಗಾರ್ ಮತ್ತು ತಬಲಾಸಾತ್ ಅನ್ನು ಗುರುರಾಜ್ ಆಡುಕಳ ಅವರು ನೀಡಿದರು.

ನಂತರ ತೆರೆ ಮರೆಯ ಸಾಧಕರಾದ ಸುಬ್ಬಣ್ಣ ಮಂಗಳೂರು, ಮಂಜುನಾಥ್ ಹೆಗಡೆ ನೆಟ್ಗಾರ್ ಹಾಗೂ ರವಿ ಹೆಗಡೆ ಅಳ್ಳಂಕಿ ಅವರನ್ನು ಸನ್ಮಾನಿಸಲಾಯಿತು. ನಾಗೇಶ್ ಮಧ್ಯಸ್ಥ ಅವರು ರಚಿಸಿದ ಕವನ ಸಂಕಲನ ‘ಭಾವ ದೀಪ್ತಿ’ ಹಾಗೂ ಬಿಂದು ಹೆಗಡೆ ಅವರ ಕಥಾ ಸಂಕಲನ ‘ಸಿಂಧುವಿನೊಳಗಿನ ಬಿಂದು’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸುನಿತಾ ಪ್ರಕಾಶ್ ದಾವಣಗೆರೆ ಹಾಗೂ ಪ್ರಸಾದ್ ಕುಲಕರ್ಣಿ ಬೆಳಗಾಂ ಇವರು ಪುಸ್ತಕ ಪರಿಚಯ ಮಾಡಿದರು. ಸುರೇಶ್ ಕೊರಕೊಪ್ಪ ಶುಭ ಕೋರಿದರೆ ಅಧ್ಯಕ್ಷತೆ ವಹಿಸಿದ ಖ್ಯಾತ ಸಾಹಿತಿ ವಿದ್ಯಾಧರ ಮುತಾಲಿಕ್ ದೇಸಾಯಿ ಮಾತನಾಡಿ ” ಪ್ರಜ್ವಲ ಅಂದರೆ ಜ್ಞಾನದ ಸಂಕೇತ ಅದನ್ನು ಬೆಳಗಿಸಲು ಪ್ರತಿಯೊಬ್ಬನ ಜ್ಞಾನವೆಂಬ ತೈಲ ಬೇಕೇ ಬೇಕು” ಅನ್ನೋದರ ಜೊತೆಗೆ “ಯಾರ ಪುಸ್ತಕವೇ ಇರಲಿ ಅಕ್ಷರ ಮಾತೆಗೆ ಬೆಲೆ ಕೊಡಿ, ಕೊಂಡು ಓದಿ ಬರಹಗಾರರನ್ನು ಪ್ರೋತ್ಸಾಹಿಸಿ” ಎನ್ನುವ ಸಂದೇಶ ನೀಡಿದರು
ಶ್ರೀಲತಾ ಗುರುರಾಜ್ ಅವರ ಭಾವಾಂತರAಗ ಕಾರ್ಯಕ್ರಮ ಜನಮನ ಗೆದ್ದಿತು. ಮೈತ್ರೇಯಿ ಕಲಾ ಟ್ರಸ್ಟ್ ಕಲಾವಿದರಿಂದ ನೃತ್ಯ ರೂಪಕ ಹಾಗೂ ಕುಮಾರಿ ಸ್ನೇಹಶ್ರೀ ಹೆಗಡೆ ಅವರಿಂದ ಕುಚಿಪುಡಿ ನೃತ್ಯ ಪ್ರದರ್ಶನಗೊಂಡಿತು. ಪ್ರಜ್ವಲ ಟ್ರಸ್ಟಿನ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕುಮಾರಿ ಶ್ರೀರಕ್ಷಾ ಹೆಗಡೆಯವರು ಪ್ರಾರ್ಥನೆ ಹಾಡಿದರು. ಟ್ರಸ್ಟಿನ ಪದಾಧಿಕಾರಿಗಳಾದ ರಮೇಶ್ ಹೆಗ್ಡೆ ಕಲಾವಿದರನ್ನು ಪರಿಚಯಿಸಿದರು. ಸುಮಾ ಹೆಗಡೆ ಇವರು ಸನ್ಮಾನ ಪತ್ರ ಓದಿದರೆ ರಾಘು ಹೆಗಡೆ ಹಾಗೂ ದತ್ತಾತ್ರೇಯ ಹೆಗಡೆ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ನಯನ .ಪಿ. ಹೆಗಡೆ ವಂದಿಸಿದರು. ಸಿಂಧು ಚಂದ್ರ ಹಾಗೂ ಕವಿತಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

error: