May 5, 2024

Bhavana Tv

Its Your Channel

ರೇವತಿ ಹೆಗಡೆಯವರ “ಅವಿನಾಭಾವ ಅರಳಿದಾಗ ಪುಸ್ತಕ ಬಿಡುಗಡೆ

ವರದಿ: ವೇಣುಗೋಪಾಲ ಮದ್ಗುಣಿ

ಶಿರಸಿ: ಮಲೆನಾಡಿನ ಸೌಂದರ್ಯವನ್ನು ಹೊರಜಗತ್ತಿಗೆ ತಿಳಿಸುವ ಕೆಲಸ ಕೃತಿಯಲ್ಲಾಗಿದೆ ಎಂದು ಹಿರಿಯ ಕವಯತ್ರಿ ಭಾಗೀರಥಿ ಹೆಗಡೆ ಹೇಳಿದರು.
ಅವರು ನಗರದ ನೆಮ್ಮದಿ ಕುಟೀರ ದಲ್ಲಿ ರೇವತಿ ಹೆಗಡೆಹೊಸಕೇರೆ ಅವರ ಅವಿತಭಾವ ಅರಳಿದಾಗ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದರು.

ರೇವತಿ ಹೆಗಡೆಯವರು ಒಬ್ಬ ನಿಸರ್ಗ ಕವಿ.ತಮ್ಮ ಕೃತಿ ಯಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯ ವನ್ನು ಬಹಳ ಸುಂದರವಾಗಿ ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ. ಮಹಿಳೆಯರೆಲ್ಲರಿಗೂ ಮನೆಯಲ್ಲಿನ ಜವಬ್ಧಾರಿಯನ್ನು ಮುಗಿಸಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು ಕಷ್ಟಕರವಾದ ಕೆಲಸ. ನಿವೃತ್ತಿ ಹೊಂದಿದ ನಂತರ ಹಲವಾರು ಕವಿಯತ್ರಿಯರು ಈಗ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ರೇವತಿ ಹೆಗಡೆಯವರೂ ಒಬ್ಬರು.
ಈಗಿನ ಕೆಲ ಕವಿಗಳು ಒಂದೇ ವಿಷಯವನ್ನು ಹಿಡಿದು ಕವನ ರಚಿಸುತ್ತಾರೆ.. ಕೇವಲ ಪ್ರೀತಿ ಯ ಬಗೆಗೆ ಕವನ ರಚಿಸುತ್ತಾರೆ. ರಾಧೆ ಕೃಷ್ಣ ಹೀಗೆ ಹಲವಾರು ವಿಷಯಗಳನ್ನು ಇಟ್ಟು ಕೊಂಡು ಕವನಗಳನ್ನು ರಚಿಸುತ್ತಾರೆ.ಹಾಗೆಯೇ ರೇವತಿ ಹೆಗಡೆಯವರು ತಮ್ಮ ಕವನ ಸಂಕಲನದ ೮೦ ಕವನಗಳಲ್ಲಿ ಹೆಚ್ಚಿನ ಕವನಗಳು ನಿಸರ್ಗದ ಬಗೆಗೇ ಇರುವುದು ವಿಶೇಷ. ನಿವೃತ್ತಿ ನಂತರ ಹೆಣ್ಣುಮಕ್ಕಳು ಬಿಡುವಾಗುತ್ತಾರೆ.. ಮೊದಲು ಮಕ್ಕಳ ಆರೈಕೆ, ಉದ್ಯೋಗ ಉಳಿದ ಕಾರ್ಯಗಳಲ್ಲಿ ತೊಡಗಿಕೊಂಡಿರುವುದರಿAದ ಸಾಹಿತ್ಯ ಕೃಷಿಗೆ ಬಿಡುವಿರುವುದಿಲ್ಲ. ಆ ಕಾರಣಕ್ಕಾಗಿಯೇ ನಿವೃತ್ತಿಯ ನಂತರ ಸಾಹಿತ್ಯದಲ್ಲಿ ಕಾಣಿಸಿಕೊಂಡವರು ಹಲವಾರು ಜನರಿದ್ದಾರೆ. ಕವಯಿತ್ರಿ ರೇವತಿ ಹೆಗಡೆಹೊಸಕೇರೆ ಅವರ ಕೃತಿಗೆ ಸಾಹಿತ್ಯಾಸಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಲಿ ಎಂದರು.

ಕವಯಿತ್ರಿ ರೇವತಿ ಹೆಗಡೆಹೊಸಕೇರೆ ಮಾತನಾಡಿ “ಎಲ್ಲ ಕಡೆ ಭಯ ಹುಟ್ಟಿಸಿದ ಕೊರೋನಾ ವೇಳೆಯಲ್ಲಿ ಹುಟ್ಟಿಕೊಂಡ ಸಾಹಿತಿ ನಾನು. ಡಿ.ಎಸ್. ನಾಯ್ಕ ನನ್ನ ಸಾಹಿತ್ಯ ಗುರುಗಳು, ಎಸ್.ಎಸ್.ಭಟ್ಟರ ಪ್ರೋತ್ಸಾಹದಿಂದಾಗಿ ಮುಂದೆ ಬಂದಿದ್ದೇನೆ. ಪುಸ್ತಕ ಬಿಡುಗಡೆಗೆ ಮುಖ್ಯ ಸಹಕಾರ ನೀಡಿದವರು ಕೃಷ್ಣ ಪದಕಿಯವರು. ಕಾಲೇಜಿನ ದಿನಗಳಲ್ಲಿಯೇ ಭಾಗಿರಥಿ ಹೆಗಡೆಯವರ ಬರಹದ ಅಭಿಮಾನಿ ನಾನು. ಅವರಿಂದಲೇ ನಾನು ಬರೆದ ಕೃತಿ ಬಿಡುಗಡೆಯಾಗುತ್ತಿರುವದು ಬಹಳಷ್ಟು ಖುಷಿತಂದಿದೆ. ಮಧ್ಯರಾತ್ರಿಯ ವೇಳೆಯಲ್ಲಿಯೂ ನನ್ನ ಕವನವನ್ನು ಕೇಳಿದವರಿಗೆ ಧನ್ಯವಾದಗಳು ಅರ್ಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬರಹಗಾರ ಎಸ್ ಎಸ್ ಭಟ್ ವಹಿಸಿದ್ದರು. ರಾಜು ಉಗ್ರಾಣಕರ ಕೃತಿಯನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ಬರಹಗಾರ ಡಿ ಎಸ್ ನಾಯ್ಕ , ಮುಕ್ತಕ ಕವಿ ಕೃಷ್ಣ ಪದಕಿ , ಸಾಹಿತಿ ಡಾ ನವೀನ್ ಕುಮಾರ ಎ.ಜಿ ಸೇರಿ ಹಲವರು ಉಪಸ್ಥಿತರಿದ್ದರು. ಪ್ರತಿಭಾ ನಾಯ್ಕ ಸ್ವಾಗತಿಸಿದರು. ರೋಹಿಣಿ ಹೆಗಡೆ ನಿರೂಪಿಸಿದರು.ಭವ್ಯ ಹಳೇಯೂರು ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.

error: