May 5, 2024

Bhavana Tv

Its Your Channel

ಶಿರಸಿಯಲ್ಲಿ ಮುಕ್ತಕ ರಚನಾ ಕಾರ್ಯಾಗಾರ

ವರದಿ: ವೇಣುಗೋಪಾಲ ಮದ್ಗುಣಿ

ಸಿರ್ಸಿ : ಸಾಹಿತ್ಯ ಸಂಚಲನ ಶಿರಸಿ ಮುಕ್ತಕ ರಚನೆಯ ಪ್ರಕಾರಗಳ ಕುರಿತು ಅರಿವು ನೀಡಲು ಕಾರ್ಯಗಾರವನ್ನು ನೆಮ್ಮದಿ ಕುಟೀರದಲ್ಲಿ ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನೆಯನ್ನು ಮುಕ್ತಕಗಳಾದ ಮಂಕುತಿಮ್ಮನ ಕಗ್ಗಗಳನ್ನು ಪ್ರಸ್ತುತ ಪಡಿಸುವ ಮುಖಾಂತರ ನಿವೃತ್ತ ಶಿಕ್ಷಕರಾದ ಎ ರಾಮ್ ಭಟ್ ಅವರು ನೆರವೇರಿಸಿದರು.

ಪ್ರಾಸ್ತಾವಿಕ ನುಡಿಯ ಜೊತೆ ತರಬೇತಿ ಅವಧಿಯನ್ನು ಸಾಹಿತ್ಯ ಸಂಚಲನ ಶಿರಸಿ ಸಂಚಾಲಕರಾದ ಮುಕ್ತಕ ಕವಿ ಕೃಷ್ಣ ಪದಕಿ ನಿರ್ವಹಿಸಿ, ಛಂದೋ ಬದ್ದ ಮುಕ್ತಕ ರಚನೆಯಲ್ಲಿನ ನಿಯಮಾವಳಿ ಹಾಗೂ ಆರು ವಿಧದ ಪ್ರಾಸಗಳ ಮಾಹಿತಿಯನ್ನು ಸ್ವರಚಿತ ಮುಕ್ತಕಗಳ ಉದಾಹರಣೆಯೊಂದಿಗೆ ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.

ಶಿರಸಿ ಶೈಕ್ಷಣಿಕ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮುಕ್ತಕ ಕವಿ ಮಹೇಶ ಕುಮಾರ್ ಹನಕೆರೆ ಅವರು ಎಲ್ಲರನ್ನು ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಮುಕ್ತಕ ರಚನೆಯ ಅಗತ್ಯತೆ, ಛಂದಸ್ಸಿನ ಪ್ರಾಮುಖ್ಯತೆಯನ್ನು ವಿವರಿಸಿ ತಮ್ಮ ಸ್ವ ರಚನೆಯ ಮುಕ್ತಕಗಳನ್ನು ವಾಚಿಸಿದರು. ಮುಕ್ತಕ ಕವಯತ್ರಿ ವಿಮಲಾ ಭಾಗ್ವತ್ ಅವರು ಮುಕ್ತಕಗಳ ಕುರಿತು ಚರ್ಚಿಸಿ ಮಂಗಳೂರಿನಲ್ಲಿ ನೆಡೆದ ಕಾರ್ಯಾಗಾರದ ಅನುಭವಗಳನ್ನು ಹಂಚಿಕೊAಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕರಾದ ಹೆಚ್ ಆರ್ ಅಮರನಾಥ ಅವರು ಹೆಚ್ಚು ಹೆಚ್ಚು ಯುವಕರು ಇಂತಹ ಕಾರ್ಯಗಾರದಲ್ಲಿ ಪಾಲ್ಗೊಳ್ಳಬೇಕು ಸಾಹಿತ್ಯ ಕೃಷಿ ಮಾಡಬೇಕು ಎಂದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಮಿತಿಯ ಜಗದೀಶ ಭಂಡಾರಿಯವರು ಮಾತನಾಡಿ ಹಿರಿಯರ ಸಾಹಿತ್ಯಗಳನ್ನು ಅಧ್ಯಯನ ಮಾಡಬೇಕು ಮತ್ತು ಅರ್ಥೈಸಿಕೊಂಡು ಸರಳ ಮುಕ್ತಕ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು. ರಾಜೇಶ್ವರಿ ಹೆಗಡೆ, ಶೋಭಾ ಭಟ್,ಮಂಗಳಗೌರಿ ಜಿ ಭಟ್ , ವಿ.ಪಿ.ಹೆಗಡೆ ವೈಶಾಲಿ, ಶಿರಸಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಮನೋಹರ ಮಲ್ಮನೆ, ಚುಟುಕು ಸಾಹಿತಿ ಉಮೇಶ್ ದೈವಜ್ಞ, ಮುಂತಾದವರು ಪಾಲ್ಗೊಂಡಿದ್ದರು. ಸಮೀಕ್ಷಾ ಪಾಯದೆ ಅವರು ಕಾರ್ಯಾಗಾರವನ್ನು ನಿರೂಪಿಸಿದರೆ ಕಥೆಗಾರ ರಾಜು ಉಗ್ರಾಣಕರ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಾಗಾರ ಯಶಸ್ವಿಯಾಗಿ ನೆರೆದವರ ಪ್ರಶಂಸೆಗೆ ಪಾತ್ರವಾಯಿತು

error: