ಶಿರಸಿ: ಕರ್ನಾಟಕದ ಮುಖ್ಯಮಂತ್ರಿಬಸವರಾಜ್ ಬೋಮ್ಮಾಯಿ ಅವರು ಶಿರಸಿಗೆ ಜನವರಿ 15 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಮನವರಿಕೆ ಮಾಡುವ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಮನವಿ ಮತ್ತು ಸಮಸ್ಯೆಗಳನ್ನ ವಿಶ್ಲೇಷಣೆ ಮಾಡಲು ತೀರ್ಮಾನಿಸಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಕಟಣೆಯಲಿ ್ಲತಿಳಿಸಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರನಾಯ್ಕ ನೇತ್ರತ್ವದಲ್ಲಿಅರಣ್ಯ ಹೋರಾಟಗಾರರ ನೀಯೋಗವು ಇಂದು ಶಿರಸಿ ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರಿಗೆ ಮುಖ್ಯಮಂತ್ರಿಗೆ ಭೇಟ್ಟಿಗೆ ಅವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರನೀಡಿ ಮೇಲಿನಂತೆ ಹೇಳಿದರು.
ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕುರಿತು ಸರ್ವೋಚ್ಚ ನ್ಯಾಯಾಲಯ ನ್ಯೂ ಡೆಲ್ಲಿಯಲ್ಲಿ ಅಂತಿಮ ವಿಚಾರಣೆ ಹಂತದಲ್ಲಿ ಇರುವುದರಿಂದ ಅರಣ್ಯ ಸಿಬ್ಬಂದಿಗಳಿoದ ಕಾನೂನು ಬಾಹಿರವಾಗಿ, ಕಾನೂನಿಗೆ ವ್ಯತಿರಿಕ್ತವಾಗಿ ಹಿಂಸೆ ನೀಡುತ್ತಿರುವುದು ಹಾಗೂ ಅಸಮರ್ಪಕ ಜಿಪಿಎಸ್ ಮಾನದಂಡದಡಿಯಲ್ಲಿ
ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಹಾಗೂ ಗಂಭೀರ ಸ್ವರೂಪದ ಸಮಸ್ಯೆಗಳನ್ನ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದೆಂದು ಅವರು ಹೇಳಿದರು.
ನಿಯೋಗದಲ್ಲಿ ಲಕ್ಷö್ಮಣ ಮಾಳ್ಳಕ್ಕನವರ, ಇಬ್ರಾಹಿಂ ಗೌಡಳ್ಳಿ, ಮೀರಸಾಬ ಅಬ್ದುಲ್ ಗಫಾರ್, ಗಣಪತಿ ರಾಮಾ ಮರಾಠಿ, ಮಹಮ್ಮದ್ ಸಾಬ ಶೇಖ್ ದಾದಾಸಾಬ ಉಪಸ್ಥಿತರಿದ್ದರು.
ಸಮಸ್ಯೆ ಬಗೆಹರಿಸುವಲ್ಲಿ ವಿಫಲ:
ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ವಿಫಲವಾಗಿರುವಹಿನ್ನೆಲೆಯಲ್ಲಿ ಗಂಭೀರ ಸ್ವರೂಪದ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ಅಧ್ಯಕ್ಷ ರವೀಂದ್ರನಾಯ್ಕ ತಿಳಿಸಿದರು.
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ