ಶಿರಸಿ: ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವಲ್ಲಿಸರಕಾರ ಬದ್ಧವಾಗಿದೆ, ಅರಣ್ಯ ಸಿಬ್ಬಂದಿಗಳಿAದ ಸಾಗುವಳಿದಾರರಿಗಾಗುವ ದೌರ್ಜನ್ಯ ನಿಯಂತ್ರಿಸುವಲ್ಲಿ ನಿರ್ಧೇಶನ ನೀಡಲಾಗಿದ್ದು, ಸುಫ್ರೀಂ ಕೋರ್ಟನಲ್ಲಿಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣ ಪತ್ರಸಲ್ಲಿಸಲು ಸರಕಾರ ಮಟ್ಟದಲ್ಲಿ ಚಿಂತಿಸಲಾಗುವುದೆAದು ಮುಖ್ಯಮಂತ್ರಿಬಸವರಾಜ್ ಬೋಮ್ಮಾಯಿ ಅವರು ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ಹತ್ತು ಬೇಡಿಕೆಗಳ ಮನವಿಯನ್ನ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಮೇಲಿನಂತೆ ಹೇಳಿದರು.
ಪ್ರಮುಖ ಹತ್ತುಬೇಡಿಕೆಗಳು:
ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸುವುದು, 1978 ರ ಪೂರ್ವ ಕೇಂದ್ರ ಸರಕಾರದಿಂದ ಮಂಜೂರಿಗೆ ಶೀಫಾರಸ್ಸು ಆಗಿರುವ 2,513 ಕುಟುಂಬಳಿಗೆ ಹಕ್ಕು ಪತ್ರ ನೀಡುವುದು, ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದು ಹಿಂದಕ್ಕೆ ಪಡೆಯುವುದು, ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳಿಂದ ಜರುಗುವ ದೌರ್ಜನ್ಯ ನಿಯಂತ್ರಿಸುವುದು, ಸರಕಾರದ ಸೌಲಭ್ಯದಿಂದ ಅರಣ್ಯವಾಸಿಗಳು ವಂಚಿತರಾಗದ ರೀತಿಯಲ್ಲಿ ಸವಲತ್ತು ಒದಗಿಸುವ ಕುರಿತು ಮುಖ್ಯಮಂತ್ರಿಗೆ ನೀಡಿದ ಮನವಿಯಲ್ಲಿಪ್ರಸ್ತಾಪಿಸಲಾಗಿದೆ.
ಜಿಲ್ಲಾದ್ಯಂತ ಜಿಲ್ಲಾದ್ಯಂತ ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳು ಕಾನೂನು ಬಾಹಿರ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಸಮಕ್ಷಮ ಕ್ರೀಮಿನಲ್ ಮೊಕದ್ದಮೆ ದಾಖಲಿಸಿದ್ದು, ಸದ್ರಿ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಧರಣಿ:
ಮುಖ್ಯಮಂತ್ರಿಗಳು ಶಿರಸಿಗೆ ಬಂದಿರುವAತಹ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರಕ್ಕೆ ಗಮನ ಹರಿಸುವ ಉದ್ದೇಶದಿಂದ ಸ್ಥಳೀಯ ಮಹಾತ್ಮ ಗಾಂಧಿ ಪ್ರತಿಮೆಯ ಏದುರು ಕಪ್ಪುಬಟ್ಟೆಧರಿಸಿ ಅರಣ್ಯ ಅತಿಕ್ರಮಣದಾರರು ಧರಣಿ ಕಾರ್ಯಕ್ರಮ ಜರಿಗಿಸಿದರು. ಮುಖ್ಯಮಂತ್ರಿಭೇಟ್ಟಿಯ ಸಂದರ್ಭದಲ್ಲಿ ಸಭಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ, ಉಸ್ತುವಾರಿ
ಸಚಿವರು ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಅರೇಬೈಲ್ ಶಿವರಾಮ ಹೇಬ್ಬಾರ್ ಅವರು ಉಪಸ್ಥಿತರಿದ್ದರು.
ನಿಯೋಗದಲ್ಲಿ ಭಿಮ್ಸಿ ವಾಲ್ಮೀಕಿ, ರಾಘವೇಂದ್ರ ನಾಯ್ಕ ಕವಂಚೂರು, ಮಾರುತಿ ನಾಯ್ಕ ಹಲಗೇರಿ, ದಿನೇಶ್ ನಾಯ್ಕ ಬೇಡ್ಕಣಿ, ಕಾರ್ಲೋಸ್ ಫರ್ನಾಂಡಿಸ್, ಕೃಷ್ಣಪ್ಪ ಹಲಗೇರಿ, ಲಕ್ಷö್ಮಣ ಮಾಳ್ಳಕ್ಕನವರ, ಸುನೀಲ್ ನಾಯ್ಕ, ಜಿಬಿ ನಾಯ್ಕ ಕಡಗೇರಿ, ರಾಜೀವ್ ಗೌಡ ಕತಗಾಲ್, ರಾಮು ಗೌಡ, ಎಮ್ ಕೆ ನಾಯ್ಕ, ಇಬ್ರಾಹಿಂ ಗೌಡಳ್ಳಿ, ಗಣಪತಿ ನಾಯ್ಕ ಕಸ್ತೂರಬಾನಗರ, ನೇಹರೂ ನಾಯ್ಕ, ಮಂಜುನಾಥ ಆಚಾರಿ, ವಿನಾಯಕ ನಾಯ್ಕ, ನಾರಾಯಣಪ್ಪ ಉಮ್ಮಡಿ, ಉದಯ ನಾಯ್ಕ, ದೇವರಾಜ ನಾಯ್ಕ, ದೇವರಾಜ್ ಮರಾಠಿ, ಮಹಾಭಲೇಶ್ವರ ನಾಯ್ಕ ಬೇಡ್ಕಣಿ, ಸಾರಂಬಿ ಕುಮಟ, ವಿನಾಯಕ ಬಂಗಾರ್ಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ