December 19, 2024

Bhavana Tv

Its Your Channel

ಹನಿ ಬಳಸಿ ಮೂರು ಉತ್ಪನ್ನ ಬಿಡುಗಡೆ

ಶಿರಸಿ: ಜೇನಿನ ಹನಿ ಬಳಸಿ ತಯಾರಿಸಲಾದ ಮೂರು ಉತ್ಪನ್ನಗಳನ್ನು ನಗರದ ತೋಟಗಾರಿಕಾ ಇಲಾಖೆಯ ಆವಾರದಲ್ಲಿ ನಡೆದ ಫಲ ಪುಷ್ಪ ಮೇಳದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರು ಮಧು ಬಿ ನರ್ಸರಿ ಮೂಲಕ ಸಿದ್ಧಗೊಳಿಸಿದ ಜೇನಿನ ಪರಾಗ ಬಳಸಿದ ಬಿ ಪೋಲನ್ ಹೆಸರಿನ ಸೋಪು, ಸವಿ ಮಧು ಇಂಡಸ್ಟ್ರೀಯ ತೂಕ ಇಳಿಸುವ ಗಾರ್ಸಿನಿಯಾ ಪಿಕಲ್ಸ, ಹಾಗೂ ಆಮ್ಲಾಶ್ವಗಂಧ ಲೇಹವನ್ನು ಕಾಗೇರಿ ಅವರು ಬಿಡುಗಡೆಗೊಳಿಸಿದರು.
ಈ ವೇಳೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಪಿ.ಸತೀಶ, ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಮಧುಕೇಶ್ವರ ಹೆಗಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎನ್.ಭಟ್ಟ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ ಇತರರು ಇದ್ದರು.

error: