May 4, 2024

Bhavana Tv

Its Your Channel

ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆ ಚರ್ಚಿಸದ ಸರಕಾರ ; ಅರಣ್ಯವಾಸಿಗಳ ಪರ ನಿರ್ಣಯಿಸದ ಕ್ರಮ ಖಂಡನಾರ್ಹ- ರವೀಂದ್ರ ನಾಯ್ಕ.

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗೆ ಸ್ಪಂಧಿಸಿ ಕಳೆದ ಏಳು ವಿಧಾನ ಸಭಾ ಅಧಿವೇಶನದಿಂದಲೂ, ಅಧಿವೇಶನದಲ್ಲಿ ಚರ್ಚಿಸಿ ಅರಣ್ಯವಾಸಿಗಳ ಪರ ನಿರ್ಣಯಿಸಲು ಆಗ್ರಹಿಸಿದ ಹೋರಾಟಗಾರರ ಭೇಡಿಕೆಗೆ ಸರಕಾರ ಸ್ಪಂದಿಸದೇ ಇರುವುದು ವಿಷಾದಕರ. ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂಧಿಸದ ಅರಣ್ಯವಾಸಿಗಳ ಸರಕಾರದ ವಿರೋಧ ನೀತಿಯು ಖಂಡನಾರ್ಹವೆAದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರವೀಂದ್ರನಾಯ್ಕ ತಿಳಿಸಿದರು.

ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಇಂದು “ಅಸಮರ್ಪಕ ಜಿಪಿಎಸ್ ಮೇಲ್ಮನವಿ” ಸ್ವೀಕೃತ ಪ್ರತಿ ವಿತರಿಸುತ್ತಾಮೇಲಿನಂತೆ ಮಾತನಾಡುತ್ತಿದ್ದರು.

ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಅರಣ್ಯಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಸಾಗುವಳಿಗೆ ಆತಂಕ ಉಂಟಾಗುತ್ತಿದ್ದು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದವAಚಿತರಾಗುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.

ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರಸಲ್ಲಿಸಿ, ಅರಣ್ಯವಾಸಿಗಳ ಪರ ನಿಲುವನ್ನು ಪ್ರಕಟಿಸುವಲ್ಲಿ ಸರಕಾರ ವಿಫಲವಾಗಿರುವುದು ಖೇದಕರ. ಈ ದಿಶೆಯಲ್ಲಿಸರಕಾರದ ಮೇಲೆ ಒತ್ತಡ ತರಲಾಗುವುದೆಂದು ಅವರು
ಹೇಳಿದರು.

ಈ ಸಂದರ್ಭದಲ್ಲಿ ಲಕ್ಷö್ಮಣ ಮಾಳ್ಳಕ್ಕನವರ, ರಾಜು ನರೇಬೈಲ್, ಶಿವಾಜಿ ಕಸ್ತೂರಬಾನಗರ, ಕೃಷ್ಣ ಮರಾಠಿ, ಅರುಣ ನಾಯ್ಕ, ಮಾಬ್ಲೇಶ್ವರ ಬಿಳಗೋಡ, ಕಿರಣ ನಾಯ್ಕ, ಅಹಮ್ಮದ್ ನರೇಬೈಲ್, ಕೆಶವ ಮರಾಠಿ, ಗಜಾನನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ತೀವ್ರಹೋರಾಟ:
ಫೇಬ್ರವರಿ 25 ರಂದು ಶಿರಸಿಗೆ ಮುಖ್ಯಮಂತ್ರಿಬAದಿರುವAತಹ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಸಲ್ಲಿಸಿದ ಐದು ಪ್ರಶ್ನಾವಳಿಯ ಉತ್ತರಕ್ಕೆ ಅರಣ್ಯ ಇಲಾಖೆಯು ಇಂದಿಗೂ ಉತ್ತರಿಸದ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಮೇಲೆ ಜರಗುತ್ತಿರುವ ದೌರ್ಜನ್ಯ, ಕಿರುಕುಳ, ಹಿಂಸೆ ವಿರುದ್ಧ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಹೇಳಿದರು.

error: