May 6, 2024

Bhavana Tv

Its Your Channel

ಜುಲೈ ೩೧ ರಂದು ಐತಿಹಾಸಿಕ ಲಕ್ಷವೃಕ್ಷಅಭಿಯಾನಕ್ಕೆ ಚಾಲನೆ ;

ಏಕಕಾಲದಲ್ಲಿ ೧೦೧ ಗ್ರಾ. ಪಂ ವ್ಯಾಪ್ತಿಯ ೪೦೦ ಮಿಕ್ಕಿ ಹಳ್ಳಿಗಳಲ್ಲಿ ಕಾರ್ಯಕ್ರಮ- ರವೀಂದ್ರನಾಯ್ಕ.

ಶಿರಸಿ: ಅರಣ್ಯವಾಸಿಗಳಿಂದ ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ೧೦೧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ೪೦೦ ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಜುಲೈ ೩೧, ಮುಂಜಾನೆ ೧೦ ಗಂಟೆಗೆ ಜಿಲ್ಲಾದ್ಯಂತ
ಏಕಕಾಲದಲ್ಲಿ ಗಿಡ ನೆಡುವ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಧ್ಯಕ್ಷರವೀಂದ್ರನಾಯ್ಕ ತಿಳಿಸಿದ್ದಾರೆ.
ಅವರು ಇಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಜುಲೈ ೩೧ ರಂದು ಜಿಲ್ಲಾದ್ಯಂತ ಲಕ್ಷ ವೃಕ್ಷ ಅಭಿಯಾನದ ಕಾರ್ಯಕ್ರಮದ ಮಾಹಿತಿ ಬಿಡುಗಡೆಗೊಳಿಸುತ್ತಾಮೇಲಿನಂತೆ ಹೇಳಿದರು.
ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ. ಅರಣ್ಯವನ್ನು ರಕ್ಷಿಸಿ, ಸಂರಕ್ಷಿಸುವುದು ಜವಬ್ದಾರಿ ಅರಣ್ಯ ವಾಸಿಗಳದ್ದಾಗಿರುವುದರಿಂದ ಅರಣ್ಯವಾಸಿಗಳು ಪರಿಸರ ಅಭಿವೃದ್ಧಿ ದಿಶೆಯಲ್ಲಿ, ವಾಸ್ತವ್ಯಕ್ಕಾಗಿ ಅತಿಕ್ರಮಿಸಿದ ಪ್ರತಿ ಕುಟುಂಬದವರು ಗಿಡ ನೆಡುವ ಅಭಿಯಾನದಲ್ಲಿ ಪಾಲ್ಗೊಂಡು ಅರಣ್ಯ ಸಾಂದ್ರತೆಯ ಮಟ್ಟ ಹೆಚ್ಚಿಸುವಲ್ಲಿ ಪಾಲ್ಗೊಂಡು ಸಕ್ರೀಯವಾಗಿ ಭಾಗವಹಿಸಬೇಕೆಂದು ರವೀಂದ್ರ ನಾಯ್ಕ ಅರಣ್ಯ ಅತಿಕ್ರಮಣದಾರರಿಗೆ ಕರೆ ನೀಡಿದ್ದಾರೆ.
೧ ಲಕ್ಷಕ್ಕೂ ಮಿಕ್ಕಿ ಗಿಡ-೧೬೫ ಗ್ರಾ.ಪಂ ವ್ಯಾಪ್ತಿಯಲ್ಲಿ:
ಜಿಲ್ಲಾದ್ಯಂತ ೧ ಲಕ್ಷಕ್ಕೂ ಮಿಕ್ಕಿ ಗಿಡ ನೆಡುವ ಕಾರ್ಯಕ್ರಮವನ್ನ ವಿವಿಧ ತಾಲೂಕುಗಳ ೧೬೫ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಜುಲೈ ೩೧ ರಿಂದ ಅಗಸ್ಟ ೧೪ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರವೀಂದ್ರನಾಯ್ಕ ತಿಳಿಸಿದ್ದಾರೆ.
ಏಕಕಾಲದಲ್ಲಿ ೧೦ ಸಾವಿರ ಅತಿಕ್ರಮಣದಾರರು:
ಗಿಡ ನೆಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ೪೦೦ ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಜುಲೈ ೩೧ ರಂದು ಏಕಕಾಲದಲ್ಲಿ ಜಿಲ್ಲಾದ್ಯಂತ ೧೦ ಸಾವಿರ ಅರಣ್ಯ ಅತಿಕ್ರಮಣದಾರರು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆಯು ದಾಖಲಾರ್ಹವಾಗಿರುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಇಮಾಮ್‌ಸಾಬ ಗೌಡಳ್ಳಿ, ರಾಜು ಅರೇರ್ ನರೇಬೈಲ್, ನೇಹರೂ ನಾಯ್ಕ ಬಿಳೂರು, ದೇವರಾಜ ಬಂಡಲ, ಶಿರಸಿ ಅಧ್ಯಕ್ಷ ಲಕ್ಷö್ಮಣ ಮಾಳ್ಳಕ್ಕನವರ, ದುಗ್ಗು ಮರಾಠಿ ಮುಂತಾದವರು ಉಪಸ್ಥಿತರಿದ್ದರು.

error: