May 6, 2024

Bhavana Tv

Its Your Channel

ಶಿರಸಿಯಲ್ಲಿ ಅಗಸ್ಟ 12 ರಂದು ಕ್ಯಾನ್ಸರ್- ವೈಧ್ಯಕೀಯ ಜಾಗೃತ ಶಿಬಿರ.

ಶಿರಸಿ: ತಜ್ಞರಿಂದ ಕ್ಯಾನ್ಸರ್- ವೈಧ್ಯಕೀಯ ಶಿಬಿರವನ್ನ ಅಗಸ್ಟ 12, ಶನಿವಾರ, ಮುಂಜಾನೆ 10 ಗಂಟೆಗೆ, ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರ ಕಲ್ಯಾಣ ಮಂಟಪದಲ್ಲಿ ಜರುಗಿಸಲಾಗಿದೆ ಎಂದು ಸ್ಪಂದನಾ ಗ್ರಾಮೀಣಾಭಿವೃದ್ಧಿ ವೇದಿಕೆಯ ಅಧ್ಯಕ್ಷಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಫಂದನಾ ಗ್ರಾಮೀಣಾಭಿವೃದ್ಧಿ ವೇದಿಕೆಯು, ಸಿಟಿ ಯೂನಿಯನ್ ಕ್ರೇಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ಇದರ ಆಶ್ರಯದಲ್ಲಿ ಜಸ್ಟಿಸ್ ಕೆ.ಎಸ್ ಹೆಗ್ಗಡೆ, ಚಾರಿಟೇಬಲ್ ಹಾಸ್ಪಿಟಲ್, ಮಂಗಳೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಗೃತ ಶಿಬಿರದಲ್ಲಿ ವೈಧ್ಯಕೀಯ ಮಾಹಿತಿಯನ್ನ ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ|| ವಿನಯ್ ಕುಮಾರ್ ಜೆ ರಾಜೇಂದ್ರ, ಮಂಗಳೂರು ಅವರು ನೀಡಲಿದ್ದು, ಶಿಬಿರದ ಉದ್ಘಾಟನೆಯನ್ನ ಕೃಷ್ಟಿ ಶಿರೂರ, ಹಿರಿಯ ಪತ್ರಕರ್ತೆ ಹಾಗೂ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ, ಹುಬ್ಬಳ್ಳಿ ಇವರು ನೇರವೆರಿಸುವರೆಂದು ತಿಳಿಸಲಾಗಿದೆ.
ಕ್ಯಾನ್ಸರ್ ಜಾಗೃತ ಶಿಬಿರದಲ್ಲಿ ಕ್ಯಾನ್ಸರ್ ಬರಲು ಕಾರಣಗಳೇನು, ಕ್ಯಾನ್ಸರ್ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಮತ್ತು ಕ್ಯಾನ್ಸರ್ ಸಂಪೂರ್ಣವಾಗಿ ಗುಣಮಾಡುವ ವಿಧಾನಗಳು ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುವುದು. ಆಸಕ್ತರು ಕ್ಯಾನ್ಸರ್ ವೈಧ್ಯಕೀಯ ಜಾಗೃತ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೋ.ನಂ: 9449193801, 9448679225 ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.

error: