December 21, 2024

Bhavana Tv

Its Your Channel

ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಜಿ. ಪಾಟೀಲರು ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಕೋವಿಡ್ ೧೯ ಸಂಬoಧ ತುರ್ತು ಸುದ್ದಿಗೋಷ್ಠಿ ನಡೆಸಿದರು.

ಇಳಕಲ್ ; ಮಹಾಮಾರಿ ಕರೋನಾ ಎರಡನೆಯ ಅಲೆಯ ತೀವ್ರತೆ ಹೆಚ್ಚುತ್ತಿದೆ. ಮುನ್ನೆಚ್ಚರಿಕೆಯಿಂದ ಅವಳಿ ತಾಲ್ಲೂಕುಗಳಾದ ಇಳಕಲ್- ಹುನಗುಂದ ದಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಗೆ ತಂದಿದ್ದರಿ೦ದ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದಿನಕ್ಕೆ ಕಡಿಮೆಯಾಗುತ್ತಿದೆ.

ಕೊರೋನಾದ ಇಂತಹ ಸಂದಿಗ್ಧ ಸಮಯದಲ್ಲಿ ಹಲವಾರು ಸಂಘ ಸಂಸ್ಥೆಗಳು ಸಹಾಯ ಹಸ್ತವನ್ನು ಚಾಚುತ್ತಿವೆ. ಅದೇ ರೀತಿ ಇಳಕಲ್‌ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದಿAದ ಸುಮಾರು ೨ ಲಕ್ಷದಷ್ಟು ಔಷಧ ಕಿಟ್ ಗಳನ್ನು ಹಾಗೂ ಒ೦ದು ಅಂಬುಲೆನ್ಸ್ ಅನ್ನು ಕೊರೋನಾ ಸೋಂಕಿತ ರೋಗಿಗಳ ಸೇವೆಗಾಗಿ ನೀಡಿದ್ದಾರೆ . ಹೀಗಾಗಿ ಇದರ ಅಧ್ಯಕ್ಷರಾದ ಗುರು ಮಹಾಂತ ಶ್ರೀಗಳಿಗೆ ಹಾಗೂ ಸಂಘದವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು .

ತಾಲ್ಲೂಕಿನಲ್ಲಿ ಕೊರೋನ (ಕೋವಿಡ್ ೧೯) ಹೆಚ್ಚಿದೆ ಆದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅದೇ ರೀತಿಯಾಗಿ ಪದೇಪದೆ ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕು .ಸರಕಾರದ ಆದೇಶ ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡರು .

ವರದಿ: ವಿನೋದ ಬಾರಿಗಿಡದ ಇಳಕಲ್

error: