ಬಾಗಲಕೋಟೆ ; ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಕೆಎಚ್ ಡಿ ಸಿ ಪ್ರಧಾನ ಕಛೇರಿ ಹುಬ್ಬಳ್ಳಿ ಇಲಕಲ್ ಉಪ ಕೇಂದ್ರ ಕಮತಗಿಯಲ್ಲಿ ಕೈಮಗ್ಗ ನೇಕಾರರು ಪ್ರತಿಭಟನೆ ನಡೆಸಿದರು. ಕಳೆದ ೩೦ ವರ್ಷಗಳಿಂದ ಪಟ್ಟಣದಲ್ಲಿ ಸುಮಾರು ನೂರಕ್ಕೂ ಅಧಿಕ ನೇಕಾರರು ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೆಯಿಗೆ ಮಾಡಿಕೊಂಡು ಬಂದಿರುತ್ತಾರೆ ಅವರ ಬದುಕು ಕೂಡ ಕೆಎಚ್‌ಡಿಸಿ ನಿಗಮದ ಮೇಲೆ ಅವಲಂಬಿತರಾಗಿರುತ್ತದೆ. ಸದರಿಯವರು ಏಕಾಏಕಿ ಭೀಮು ಹಾಗೂ ಕಚ್ಚಾ ವಸ್ತುಗಳನ್ನು ನೇಕಾರರಿಗೆ ಕೊಡುವುದನ್ನು ನಿಲ್ಲಿಸಿದರು ಇದರಿಂದ ನೇಕಾರರ ಬದುಕು ಕಷ್ಟಕರವಾಗಿದೆ ನಾವು ಈವತ್ತು ನೇಯದರೆ ಮಾತ್ರ ನಮಗೆ ಉಣ್ಣಲು ಬರುವುದು ಈಗ ಇವರು ಯಾವುದೇ ಭೀಮು ಹಾಗೂ ಕಚ್ಚಾ ವಸ್ತುಗಳನ್ನು ನಮಗೆ ಪೂರೈಕೆ ಮಾಡುವುದನ್ನು ನಿಲ್ಲಿಸಿದರೆ ನಾವು ಕೆಎಚ್ ಡಿಸಿ ಕಚೇರಿದರು ಪ್ರತಿಭಟನೆ ಮಾಡುತ್ತೇವೆ ಎಂದು ಯೋಜನಾ ಅಧಿಕಾರಿಗಳಿಗೆ ಮನವಿ ಪತ್ರವನ್ನು ಕೊಟ್ಟರು.
ಈ ಮನವಿ ಪತ್ರವನ್ನು ಸ್ವೀಕರಿಸಿ ಯೋಜನಾಧಿಕಾರಿ ಇಳಕಲ್ ಅವರು ಮಾತನಾಡಿ ನಮಗೆ ಸರಕಾರದಿಂದ ಮೌಖಿಕವಾಗಿ ಕೆಎಚ್ ಡಿಸಿ ನೇಕಾರರಿಗೆ ಭೀಮು ಅಥವಾ ಕಚ್ಚಾ ವಸ್ತುಗಳನ್ನು ಕೊಡಬಾರದು ಎಂದು ತಿಳಿಸಿರುತ್ತಾರೆ. ಹಾಗೂ ಕೆ ಎಚ್ ಡಿ ಸಿ ಕೈಮಗ್ಗ ನೇಕಾರರು ನೆಯ್ದ ಬಟ್ಟೆಗಳು ನಮ್ಮ ಸರಕಾರಿ ಶಾಲೆಯ ಮಕ್ಕಳಿಗೆ ವಿದ್ಯಾ ವಿಕಾಸದಡಿ ಬಟ್ಟೆ ನೀಡುತ್ತಿದ್ದರು ಈಗ ಸರ್ಕಾರವು ನಮ್ಮಲ್ಲಿ ತಯಾರಿಸುವಂತಹ ಬಟ್ಟೆಗಳನ್ನು ತೆಗೆದುಕೊಳ್ಳಲು ತಯಾರು ಇಲ್ಲ ಆದ್ದರಿಂದ ನೇಕಾರರಿಗೆ ನೆಯ್ದು ಕೊಟ್ಟ ಬಟ್ಟೆಗೆ ನಮ್ಮಲಿ ದುಡ್ಡು ಇಲ್ಲಾ ಎಂದು ಹೇಳಿದರು. ಈ ವಸ್ತು ಸ್ಥಿತಿಯನ್ನು ನಾನು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದ ಮಟ್ಟಿಗೆ ತಿಳಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಇವರ ಮಾತನ್ನು ಆಲಿಸಿದ ಕೆ ಎಚ್ ಡಿ ಸಿ ಕೈಮಗ್ಗ ನೇಕಾರರು ಈ ನಮ್ಮ ಬದುಕನ್ನು ಕಸಿದುಕೊಳ್ಳಬೇಡಿ ನಮ್ಮನ್ನು ಈ ಸಂಕಷ್ಟದಿAದ ಪಾರು ಮಾಡಿ ಎಂದು ಯೋಜನಾಧಿಕಾರಿಗಳಿಗೆ ಕೈಮುಗಿದು ಕೇಳಿಕೊಂಡರು. ಈ ಸಂದರ್ಭದಲ್ಲಿ ಕೆಎಚ್ ಡಿ ಸಿ ಕೈಮಗ್ಗ ನೇಕಾರರೆಲ್ಲರೂ ಭಾಗವಹಿಸಿದ್ದರು.
ವರದಿ ; ನಿಂಗಪ್ಪಾ ಕೆ, ಬಾಗಲಕೋಟೆ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ
ಕಮತಗಿ ಪಟ್ಟಣದಲ್ಲಿ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳವರಿಂದ ಮತದಾನ