April 27, 2024

Bhavana Tv

Its Your Channel

ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ

ಮಿತ ಆಹಾರ ಹಿತ ಜೀವನಕ್ಕೆ ನಾಂದಿ: ಡಾ.ಬಸವಲಿಂಗ ಶ್ರೀ

ಕಮತಗಿ: ಮಿತವಾದ ಆಹಾರ ಕ್ರಮವು ಹಿತವಾದ ಜೀವನಕ್ಕೆ ನಾಂದಿಯಾಗುತ್ತದೆ. ಆಹಾರ ಸೇವಿಸುವುದು ಮುಖ್ಯವಲ್ಲ, ಅದನ್ನು ಅರಗಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ಶಿರೂರು ವಿಜಯ ಮಹಾಂತತೀರ್ಥದ ಡಾ. ಬಸವಲಿಂಗ ಸ್ವಾಮೀಜಿ ಅವರು ಹೇಳಿದರು.
ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಶ್ರೀಮತಿ ಯೋಗಿನಿದೇವಿ ಆರ್. ಪಾಟೀಲ ಗ್ರಾಮೀಣ ಮಹಿಳಾ ಶಿಕ್ಷಣ (ಬಿಇಡಿ) ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಮೂರು ದಿನಗಳ ವರೆಗೆ ಹಮ್ಮಿಕೊಂಡಿರುವ 2022-23ನೇ ಸಾಲಿನ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನಿಗೆ ಮೂಲಭೂತವಾಗಿರುವ ಪೌರತ್ವದ ಬಗ್ಗೆ ಅರಿತುಕೊಂಡು ಬದುಕಿದಾಗ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಶಿಕ್ಷಕರಿಗೆ ಅಪಾರವಾದ ಗೌರವ ಭಾವನೆ ಇದೆ. ಶಿಕ್ಷಕರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.
ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಮಾತನಾಡಿ, ವೈಜ್ಞಾನಿಕ ಕಾಲಘಟ್ಟದಲ್ಲಿರುವ ನಾವೆಲ್ಲ ತಂತ್ರಜ್ಞಾನಗಳ ಬಗ್ಗೆ ಅರಿವು ಹೊಂದಬೇಕಾಗಿದೆ. ಆ ಮೂಲಕ ತಿಳುವಳಿಕೆ ಮಟ್ಟವನ್ನು ವೃದ್ದಿಸಿಕೊಳ್ಳಬೇಕಿದೆ. ತಂತ್ರಜ್ಞಾನಗಳು ಕ್ಷಣ ಕ್ಷಣಕ್ಕೂ ಬದಲಾವಣೆಯಾಗುತ್ತಿದೆ. ಹೊಸದಾಗಿ ಆವಿಸ್ಕಾರಗೊಳ್ಳುತ್ತಿವೆ ಈ ಬಗ್ಗೆ ಎಚ್ಚರಿಕೆ ವಹಿಸಿ ಅವುಗಳನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.
ಪ್ರಾಚಾರ್ಯ ಡಾ.ಪಿ.ಆಯ್. ಮೊಮಿನ್ ಮಾತನಾಡಿ, ಪ್ರಶಿಕ್ಷಣಾರ್ಥಿಗಳಲ್ಲಿ ಸಂಘಟನೆ ಮನೋಭಾವನೆ ಬೆಳೆಸುವುದು, ಗ್ರಾಮೀಣ ಭಾಗದ ಸಮಸ್ಯೆ ಅರ್ಥ ಮಾಡಿಕೊಳ್ಳುವುದು, ಜನರೊಂದಿಗೆ ಉತ್ತಮವಾಗಿ ಸ್ಪಂದಿಸುವ ಮನೋಗುಣವನ್ನು, ಪರಸ್ಪರ ಹೊಂದಾಣಿಕೆ, ಸಹಕಾರ ಭಾವನೆಗಳನ್ನು ಬೆಳೆಸುವುದು ಶಿಬಿರದ ಉದ್ದೇಶವಾಗಿದೆ. ಮೂರು ದಿನಗಳ ವರೆಗೆ ನಡೆಯುವ ಶಿಬಿರದಲ್ಲಿ ಅನೇಕ ವಿಷಯಗಳ ಬಗ್ಗೆ ಚಿಂತನ-ಮAಥನವಾಗಲಿದೆ ಎಂದು ಹೇಳಿದರು.
ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿ ವಿದ್ಯಾಧರ ಮಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಂ.ಬಿ. ಶಾಬಾದಿ, ಶಿವಣ್ಣ ಗುರಿಕಾರ, ಆಡಳಿತಾಧಿಕಾರಿ ಅನಿಲಕುಮಾರ ಎಸ್. ಕಲ್ಯಾಣಶೆಟ್ಟಿ, ಪೌರತ್ವ ತರಬೇತಿ ಶಿಬಿರದ ಕಾರ್ಯಾಧ್ಯಕ್ಷ ಎ.ಎಚ್. ಮಲಘಾಣ, ಉಪನ್ಯಾಸಕರಾದ ಜಿ.ಎಲ್.ವಾಲಿಕಾರ, ಎಂ.ಎA. ಲಾಯದಗುಂದಿ, ವಿ.ಬಿ. ಜಕ್ಕಲಿ, ಎಂ.ಎಲ್. ಕದಾಂಪೂರ, ಕೆ.ಎಸ್.ಭಜಂತ್ರಿ, ವಾಯ್.ಎಚ್. ಕಂಬಳಿ ಸೇರಿದಂತೆ ಅನೇಕರು ಇದ್ದರು.
ಶ್ರೀದೇವಿ ದಾಸಪ್ಪನವರ ಸ್ವಾಗತಿಸಿದರು. ಸವಿತಾ, ಐಶ್ವರ್ಯ ನಿರೂಪಿಸಿದರು. ಮಂಜುಳಾ ವಂದಿಸಿದರು. ಕಾರ್ಯಕ್ರಮದ ನಂತರ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವರದಿ : ನಿಂಗಪ್ಪಾ ಕೆ. ಬಾಗಲಕೋಟೆ

error: