December 19, 2024

Bhavana Tv

Its Your Channel

ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಇಳಕಲ್ ತಹಶೀಲ್ದಾರ ನಿಂಗಪ್ಪ ಬಿರಾದಾರ ಚಾಲನೆ

ಇಳಕಲ್ ; ಗ್ರಾಮೀಣ ಬಾಗದಲ್ಲಿ ಮಹಾಮಾರಿ ಕೊರೋನಾ ಹೆಚ್ಚಾಗಿ ಕಂಡುಬರುತ್ತಿದ್ದರಿAದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವೈಧ್ಯರ ನಡೆ ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಇಳಕಲ್ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರು ಚಾಲನೆ ನೀಡಿದರು.

ಸೋಮವಾರ ತಾಲೂಕಾ ದಂಡಾಧಿಕಾರಿಗಳ ಕಾರ್ಯಲಯದಲ್ಲಿ ಮಾತನಾಡುತ್ತಾ ತಾಲೂಕಿನ ೭೫ ಗ್ರಾಮಗಳ ಮನೆ-ಮನೆಗು ಕೊವೀಡ್ ತಪಾಸಣೆ, ಮುನ್ನೆಚ್ಚರಿಕೆ, ಜಾಗೃತಿ ಮುಡಿಸುವ ಕಾರ್ಯಕ್ರಮ ಇದಾಗಿದ್ದು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯ ೧೦ ವೈದ್ಯರ ತಂಡ ದಿನಕ್ಕೆ ೪ ರಿಂದ ೫ ಪಂಚಾತಿಗಳಿಗೆ ಬೇಟಿನೀಡಿ ಅಲ್ಲಿ ಜನರ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ರೋಗದ ಲಕ್ಷಣ ಕಂಡುಬAದಲ್ಲಿ ಆಸ್ಪತ್ರೆಗೆ ದಾಖಲಿಸುವ ಕಾರ್ಯಕ್ರಮ ಇದಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳಾದ ನಿಂಗಪ್ಪ ಬಿರಾದಾರ ಹೇಳಿದರು .
ಬಿಜೆಪಿ ಪಕ್ಷದ ಗ್ರಾಮೀಣ ಮಂಡಳದ ಅಧ್ಯಕ್ಷರಾದ ಮಹಾಂತಗೌಡ ಪಾಟೀಲ (ತೊಂಡಿಹಾಳ) ಮಾತನಾಡಿ ಜನ ಜಾಗೃತಿ ಕಾರ್ಯಕ್ರಮ ಒಳ್ಳೆದಾಗಿದ್ದು ಯಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತಾಲೂಕ ಆಡಳಿತದ ತಹಶೀಲ್ದಾರ ಗ್ರೇಡ್-೨ ರತ್ನಮ್ಮ , ಶಿರಸ್ತೆದಾರ ಎಸ್.ಡಿ.ಗೌಡರ, ಪ್ರಭಾರಿ ಶಿರಸ್ತೆಧಾರ ಈಶ್ವರ ಗಡ್ಡಿ, ಇಳಕಲ್ ಕಂದಾಯ ನೀರಿಕ್ಷಕ ನವೀನ ಬಲಕುಂದಿ, ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ,ಎಸ್ ಡಿಎ ವಜಲದ ಮತ್ತು ನೊಂದಣಿ ಅಧಿಕಾರಿ ಪ್ರವೀಣ ಮ್ಯಾಗೇರಿ ,ಆಹಾರ ನಿರೀಕ್ಷಕರ ಚಿದಾನಂದ ವಡ್ಡವಡಗಿ ಮೊದಲಾದವರು ಉಪಸ್ಥಿತರಿದ್ದರು.

ವರದಿ: ವಿನೋದ ಬಾರಿಗಿಡದ

error: