December 21, 2024

Bhavana Tv

Its Your Channel

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ೧೦೦-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ.

ಬಾಗಲಕೋಟೆ ; ಜಿಲ್ಲೆಯ ಗುಳೇದಗುಡ್ಡದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಡೀಸೆಲ್ ಗ್ಯಾಸ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು. ನಿರಂತರವಾಗಿ ಬೆಲೆ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ ಸಮಿತಿ ಇಂದು ಮಾಲಪಾನಿ ಪೆಟ್ರೋಲ್ ಬಂಕ್ ಮುಂಭಾಗ ೧೦೦-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿತು.ಈ ಸಂದರ್ಭದಲ್ಲಿ ಯುವ ಮುಖಂಡರಾದ ಹೊಳಬಸು ಶೆಟ್ಟರ್ , ಸಂಜಯ್ ಬರಗುಂಡಿ , ಗುಳೇದಗುಡ್ಡ ಬ್ಲಾಕ್ ಅಧ್ಯಕ್ಷರಾದ ರಾಜು ಜವಳಿ , ನಾಗಪ್ಪ ಗೌಡರ , ಙ ಖ ಹೆಬ್ಬಳ್ಳಿ ,ರಾಜು ತಾಪಡಿಯಾ , ಮಲ್ಲೆಶಪ್ಪ ಬೆಣ್ಣಿ , ಶಿವನಯ್ಯ ಮಳ್ಳಿಮಠ , ಪ್ರಕಾಶ ಮುರಗೋಡ, ಜಮೀರ ಮೌಲ್ವಿ , ರಫೀಕ ಕಲಬುರಗಿ, ಪುರಸಭಾ ಅಧ್ಯಕ್ಷೆ ಶಿಲ್ಪಾ ಹಳ್ಳಿ , ಶರೀಪಾ ಮಂಗಳೂರು , ವಿಠ್ಠಲ್ ಕಾವಡೆ , ಶ್ಯಾಮ್ ಮೇಡಿ, ಮಹಂತೇಶ ಲಕ್ಕುಂಡಿ, ಅಮರೇಶ ಕವಡಿಮಟ್ಟಿ ,ಗೋಪಾಲ್ ಭಟ್ಟಡ , ಈರಣ್ಣ ಹವೇಲಿ, ಬಾಬು ಬೊಂಬಲೇಕರ , ರಮೇಶ ಅಗಸಿಮನಿ, ಯಲ್ಲಪ್ಪ ಮನ್ನಿಕಟ್ಟಿ , ಹನಮಂತ ಗೌಡರ , ಸಾಗರ ಕೊಣ್ಣೂರ , ವಿನೋದ ಗಾಜಿ , ಸಲೀಂ ಇಲಕಲ್ , ಪ್ರಕಾಶ ರೋಜಿ , ಮುಬಾರಕ್ ಮಂಗಳೂರು , ಚಂದ್ರು ಪಟ್ಟಣಶೆಟ್ಟಿ, ಶಂಕರ ರಂಜನಿಗಿ, ಮಂಜು ಬಳಗಲಿ, ಇತರರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: