
ಭಟ್ಕಳ: ಹಣ್ಣಿನ ಗಾಡಿಯಲ್ಲಿ ಗೋವಿನ ಮಾಂಸವನ್ನು ಅಡಗಿಸಿಟ್ಟುಕೊಂಡು ಭಟ್ಕಳಕ್ಕೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರು ಶಿರಾಲಿ ಚೆಕ್ ಪೋಸ್ಟ ಬಳಿ ಗೂಡ್ಸ್ ವಾಹನ ಸಹಿತ ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.
ಹಾವೇರಿ ಯಿಂದ ಭಟ್ಕಳದ ಕಡೆಗೆ ಕಲ್ಲಂಗಡಿ ಹಣ್ಣುಗಳೂ ಸೇರಿದಂತೆ ಇತರೇ ಹಣ್ಣುಗಳನ್ನು ನೋಟಕ್ಕೆ ಪ್ಲಾಸ್ಟಿಕ್ ಖಾಲಿ ಬಾಕ್ಸನಲ್ಲಿ ಹಣ್ಣುಗಳು ತುಂಬಿ ಯಾರಿಗೂ ಅನುಮಾನ ಬರದಂತೆ ಅದರ ಅಡಿಯಲ್ಲಿ ಸುಮಾರು ೫೦೦ ಕೆ.ಜಿ.ಯಷ್ಟು ದನದ ಮಾಂಸವನ್ನು ಸಾಗಿಸುತ್ತಿರುವ ಮಾಹಿತಿ ದೊರೆತ ಪೊಲೀಸರು ವಾಹನವು ಶಿರಾಲಿ ಚೆಕ್ ಪೋಸ್ಟ್ ಹತ್ತಿರ ತಲುಪುತ್ತಲೇ ನಿಲ್ಲಿಸಿ ತಪಾಸಣೆ ನಡೆಸಿದ್ದು ಹಣ್ಣುಗಳ ಅಡಿಯಲ್ಲಿ ಅಡಗಿಸಿಟ್ಟ ಗೋವಿನ ಮಾಂಸ ಪತ್ತೆಯಾಗಿದೆ.
ಗೂಡ್ಸ್ ವಾಹನದಲ್ಲಿ ಗೋವಿನ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಹಾನಗಲ್ ಮೂಲದ ಆರೋಪಿ ಮೌಲಾಲಿ ಬಾಷಸಾಬ್ ತೋಟದ ೩೩ ವರ್ಷ ಕಲ್ಗದ್ರ ಹಾನಗಲ್ ನಿವಾಸಿ ಯಾಗಿದ್ದು ಹಾಗೂ ಇನೊಬ್ಬ ಆರೋಪಿ ಜಿಲಾನಿ ಗೌಸ ಮೊಹಿದ್ದಿನ್ ಅತ್ತಾರ,೩೨ ವರ್ಷ ಬೆಳಗಲ್ ಪೇಟೆ,ಹಾನಗಲ್ ನಿವಾಸಿ ಯಾಗಿದ್ದು,ಇಬ್ಬರು ಆರೋಪಗಳು ಭಟ್ಕಳದ ಮುಜಾಪರ್ ವಾಸ ಈತನಿಗೆ ೧ ಲಕ್ಷ ಮೌಲ್ಯದ ಸುಮಾರು ೫೦೦ ಕೆ.ಜಿ ದನದ ಮೌಂಸ ನೀಡಲ್ಲಿಕ್ಕೆ ಬರುತ್ತಿದ್ದರು ಎನ್ನಲಾಗಿದೆ
ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ ಕುಮಾರ್ ವಿ.ದೂರು ನೀಡಿದ್ದು ಎ.ಎಸೈ ಕೃಷ್ಣಾನಂದ ನಾಯ್ಕ ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ತನಿಖೆ ಕೈಗೊಂಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ