
ಭಟ್ಕಳ: ತೆಂಗಿನಮರವೇರಿ ಕಾಯಿ ಕೊಯ್ಯುತ್ತಿದ್ದ ಕೃಷಿ ಕೂಲಿ ಕಾರ್ಮಿಕನೊಬ್ಬನಿಗೆ ತೆಂಗಿನ ಗರಿಯು ವಿದ್ಯುತ್ ಲೈನ್ ತಗುಲಿದ ಪರಿಣಾಮ ಮರದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಜಾಲಿಯ ಬದ್ರಿಯಾ ಕಾಲೋನಿಯಲ್ಲಿ ನಡೆದಿದೆ.
ಮೃತ ಪಟ್ಟ ವ್ಯಕ್ತಿ ಜಾಲಿ ಹಾರುಮಕ್ಕಿಯ ರಾಮ ಸೋಮಯ್ಯ ಗೊಂಡ (30) ಎನ್ನುವವನಾಗಿದ್ದು ಈತನು ಕೃಷಿ ಕೂಲಿ ಕಾರ್ಮಿಕನಾಗಿದ್ದು ಶುಕ್ರವಾರ ಮಧ್ಯಾಹ್ನ ಬದ್ರಿಯಾ ಕಾಲೋನಿಯ ಅಬ್ದುಲ್ ರಶೀದ್ ಅವರ ತೋಟದಲ್ಲಿದ್ದ ತೆಂಗಿನಮರದ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಸನಿಹದಲ್ಲೇ ಇದ್ದ ವಿದ್ಯುತ್ ಲೈನ್‌ಗೆ ಆಕಸ್ಮಿಕವಾಗಿ ತೆಂಗಿನ ಗರಿಗೆ ತಾಗಿ ಈತನಿಗೆ ಶಾಕ್ ಹೊಡೆದಿದೆ. ಶಾಖ್‌ನಿಂದಾಗಿ ಅಸ್ವಸ್ಥಗೊಂಡ ಈತ ಮರದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿ ಅವಿವಾಹಿತ ನಾಗಿದ್ದು ಅತ್ಯಂತ ಕಡು ಬಡವನಾಗಿದ್ದು ಕೃಷಿ ಕಾಯಕವನ್ನು ನಂಬಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಈತನ ಸಹೋದರ ಮಾದೇವ ಸೋಮಯ್ಯ ಗೊಂಡ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.



More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ