ಹೊನ್ನಾವರ : ರೋಟರಿ ಕ್ಲಬ್ ಹೊನ್ನಾವರ ಇವರಿಂದ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳ ಮೌಲ್ಯದ ಮೂರು ಸ್ಯಾನಿಟೈಸರ್ ಸ್ಪೆçÃಯರ್ ಮಷೀನ್ಗಳನ್ನು ಹಾಗೂ ಒಂದು ಬಿಸಿ ಹಾಗೂ ತಣ್ಣೀರಿನ ಡಿಸ್ಪೆನ್ಸರ್ ಮೆಷಿನ್ ಗಳನ್ನೂ ಹೊನ್ನಾವರ ತಾಲೂಕಾ ಆಸ್ಪತ್ರೆಗೆ ನೀಡಲಾಗಿದೆ.
ರೋಟರಿ ಅಧ್ಯಕ್ಷ ರೋ ಸೂರ್ಯಕಾಂತ್ ಸಾರಂಗ ರವರಿಂದ ಈ ಉಪಕರಣಗಳನ್ನು ಸ್ವೀಕರಿಸಿದ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿಯವರು ಮಾತನಾಡಿ ಈ ಉಪಕರಣಗಳಿಂದ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಕೋವಿಡ್ ಸೋಂಕಿತ ರೋಗಿಗಳಿಗೆ ಅವಶ್ಯವಿರುವ ಬಿಸಿ ನೀರು ಪೂರೈಸಲು ಅನುಕೂಲಕರವಾಗಲಿದೆ ಎಂದರು
ಹೊನ್ನಾವರ ರೋಟರಿ ಸಂಸ್ಥಯು ಈ ಹಿಂದೆಯೂ ಕೂಡ ಹಲವಾರು ಉಪಯುಕ್ತ ಸಾಮಗ್ರಿ ಗಳನ್ನು ತಾಲೂಕಾ ಆಸ್ಪತ್ರೆಯ ಕೋವಿಡ್ ವಾರ್ಡಿಗೆ ನೀಡಿದ್ದನ್ನು ಸ್ಮರಿಸಿದರು.
ರೋಟರಿ ಕ್ಲಬ್ ಮುಖಾಂತರ ಈ ಉಪಕರಣಗಳನ್ನು ನೀಡಲು ಸಹಕರಿಸಿದ ಪವನ ಕುಮಾರ್ ಭಟ್ ಹಾಗೂ ಅವರ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಲಾಯಿತು. .
ಕಾರ್ಯದರ್ಶಿ ರೋ ನಸ್ರುಲ್ಲ ಸಿದ್ದಿ , ರೋ. ಸ್ಟೆಪನ್ ರೊಡ್ರಗೀಸ್, ರೋ. ಡಿ ಜೆ ನಾಯ್ಕ್, ರೋ. ದಿನೇಶ್ ಕಾಮತ್ ಹಾಗೂ ರೋ. ಮಹೇಶ್ ಕಲ್ಯಾಣಪುರ ಉಪಸ್ಥಿತರಿದ್ದರು.
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ