December 22, 2024

Bhavana Tv

Its Your Channel

ಧೈರ್ಯವಾಗಿ ಬಂದು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ: ತಾಲೂಕು ದಂಡಾಧಿಕಾರಿ ವೈ. ರವಿ ಮನವಿ

ಮಧುಗಿರಿ: ಪಟ್ಟಣದ ಟಿವಿವಿ ಕಾಲೇಜ್, ಮಹಿಳಾ ಸಂಘದ ಕಟ್ಟಡ, ಹಾಗೂ ಎಂಜಿಎA ಶಾಲೆ ಹಾಗೂ ಗೋರಿಪಾಳ್ಯದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಹಾಗೂ ೪೫ ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ಅನ್ನು ಮಧುಗಿರಿ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ದಂಡಾಧಿಕಾರಿ ವೈ.ರವಿ ಮೂರನೇ ಅಲೆ ಬರುತ್ತಿದೆ ಎಂದು ವೈದ್ಯರು ಸೂಚನೆ ನೀಡುತ್ತಿದ್ದಾರೆ, ಅದನ್ನು ಎದುರಿಸಬೇಕು ಎಂದರೆ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಅನ್ನು ತೆಗೆದುಕೊಳ್ಳಬೇಕು. ಇಷ್ಟು ದಿನ ಏನಾಗುತ್ತಿತ್ತು ಅಂದರೆ ಗ್ರಾಮಾಂತರ ಪರದೇಶಗಳಲ್ಲಿ ಯಾರು ಮುಂದೆ ಬರುತ್ತಿರಲಿಲ್ಲ ಮೊಬೈಲ್ ಗಳಲ್ಲಿ ಮೆಸೇಜುಗಳಲ್ಲಿ ಮತ್ತು ಸುಳ್ಳು ವದಂತಿಗಳನ್ನು ಕೇಳಿ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಯಾರು ಸಹ ಮುಂದೆ ಬರುತ್ತಿರಲಿಲ್ಲ, ಆದರೆ ಈಗ ಎಲ್ಲಾ ಗ್ರಾಮಾಂತರ ಪ್ರದೇಶದಲ್ಲಿನ ಸಾರ್ವಜನಿಕರು ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ೧೮ ವರ್ಷ ಮೇಲ್ಪಟ್ಟ ಅವರಿಂದ ಎಲ್ಲರಿಗೂ ಸಹ ಎಕ್ಸಿಬಿಶನ್ ನೀಡುತ್ತಿದ್ದೇವೆ, ಆದರೆ ಪಟ್ಟಣ ಪ್ರದೇಶದಲ್ಲಿ ಕಾಲೋನಿಗಳಲ್ಲಿ ಮತ್ತು ಮುಸ್ಲಿಂ ಬಾಂಧವರು ಯಾರು ಸಹ ವ್ಯಾಕ್ಸಿನೇಷನ್ ಅನ್ನು ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ, ದಯವಿಟ್ಟು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ವ್ಯಾಕ್ಸಿನೇಷನ್ ತೆಗೆದುಕೊಳ್ಳಿ ಮತ್ತು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಅದರಿಂದ ಸೋಂಕು ತಗಲಿದರು ನಮ್ಮ ದೇಹದ ಒಳಗಡೆ ಅಂಗಾAಗಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಆದ್ದರಿಂದ ಸಾರ್ವಜನಿಕರು ಎಲ್ಲರೂ ಗಮನಹರಿಸಿ ಕಡ್ಡಾಯವಾಗಿ ಬಂದು ವ್ಯಾಕ್ಸಿನೇಷನ್ ತೆಗೆದುಕೊಳ್ಳಿ ಎಂದು ತಿಳಿಸಿದರು.

ವರದಿ ಮಧು ಮಧುಗಿರಿ

error: