
ತುಮಕೂರು: ‘ದೇಶದ ಅತಿದೊಡ್ಡ ಸೋಲಾರ್ ಪಾರ್ಕ್’ ಎಂದು ಹೆಸರಾದ ತುಮಕೂರು ಜಿಲ್ಲೆಯ ಪಾವಗಡದ ನಾಗಲಮಡಿಕೆಯ ೧೨ ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ೨೦೫೦ ಮೆಗಾವ್ಯಾಟ್ ಉತ್ಪಾದನೆಯ ಸೋಲಾರ್ ಪಾರ್ಕ್ ಗೆ ಸಚಿವ ವಿ.ಸುನಿಲ್ ಕುಮಾರ್ ಭೇಟಿ ನೀಡಿ ಸ್ಥಳೀಯ ರೈತರೊಂದಿಗೆ ಸಭೆ ಹಾಗೂ ಅಹವಾಲು ಸ್ವೀಕಾರ ಮಾಡಿದರು.
ನಂತರ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ನಡೆಸಿ ಸ್ಥಳೀಯರಿಗೆ ಉದ್ಯೋಗ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು, ಸ್ಥಳೀಯ ಪ್ರದೇಶದ ಗ್ರಾಮಗಳಿಗೆ ಸೋಲಾರ್ ದಾರಿದೀಪ ಅಳವಡಿಸಲು ನಿರ್ದೇಶನ, ೬೭ ಕೋಟಿ ರೂಪಾಯಿ ಸಿ ಎಸ್ ಆರ್‌ಅನುದಾನದಲ್ಲಿ ಅಲ್ಲಿಯ ಸ್ಥಳೀಯ ಶಾಲೆ, ಶೌಚಾಲಯ, ಆಸ್ಪತ್ರೆಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕೆಂದರು.

More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ತುಮಕೂರಿನ ಮಹಿಳಾ ವಿದ್ಯುತ ಗುತ್ತಿಗೆದಾರರಾದ ಸುಪ್ರಿಯಾರವರಿಗೆ ಸನ್ಮಾನ