May 29, 2023

Bhavana Tv

Its Your Channel

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಹರಿದ್ವಾರ :- ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಶಾಖಾ ಮಠ ಹರಿದ್ವಾರದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ 25/11/2022 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ರವೀಂದ್ರ ಮಹಾರಾಜ್ ಅಧ್ಯಕ್ಷರು ಅಖಿಲ ಭಾರತ ಅಖಾರ ಮತ್ತು ಕಾರ್ಯದರ್ಶಿ ನಿರಂಜನಿ ಅಖಾರ, ಶ್ರೀಮಹಾಂತ್ ಪ್ರೇಮಗಿರಿ ಜಿ ಮಹಾರಾಜ್ ಅಂತರಾಷ್ಟ್ರೀಯ ಅಧ್ಯಕ್ಷ ಶ್ರೀ ಪಂಚದಸ್ನo ಜುನ ಅಖಾರ, ಶ್ರೀಮಹಾಂತ್ ವಿದ್ಯಾನಂದ ಸರಸ್ವತಿ ಜಿ ಮಹಾರಾಜ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಪಂಚದಸ್ನo ಜುನ ಅಖಾರ, ಮಹಾಮಂಡಲೇಶ್ವರ ಶ್ರೀ ಸ್ವಾಮಿ ವಿಜ್ಞಾನಾನಂದ ಸರಸ್ವತೀ ಜೀ, ಶ್ರೀ ಸ್ವಾಮಿ ವಿಜ್ಞಾನಾನಂದ ಸರಸ್ವತಿ ಜಿ ಮಹಾರಾಜ ಮಹಾಮಂಡಲೇಶ್ವರ, ಶ್ರೀ ಸ್ವಾಮಿ ಲಲಿತಾನಂದ ಗಿರಿ ಜಿ ಮಹಾರಾಜ್ ಜೈರಾಮ್, ಆಶ್ರಮಗಳ ಸರ್ವೋಚ್ಚ ಅಧ್ಯಕ್ಷ ಪೂಜ್ಯ ಬ್ರಹ್ಮಸ್ವರೂಪ ಬ್ರಹ್ಮಚಾರಿ ಜಿ ಮಹಾರಾಜ್, ಶ್ರೀಮಹಾಂತ್ ದೇವಾನಂದ ಸರಸ್ವತಿ ಜಿ ಮಹಾರಾಜ್, ಶ್ರೀಮಹಾಂತ್ ಮಹೇಶ್ ಪುರಿ ಜಿ ಮಹಾರಾಜ್, ಶ್ರೀಮಹಾಂತ್ ಇಂದ್ರಾನoದ್ ಸರಸ್ವತಿ ಮಹಾರಾಜ್, ಮಂಕಾಳ್ ವೈದ್ಯ, ಮಾಜಿ ಮಾನ್ಯ ಶಾಸಕರು, ಭಟ್ಕಳ, ಗೋವಿಂದ್ ನಾಯಕ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಅಭಿರುದ್ಧ ನಿಗಮ್, ಕಿರಣ್ ಕುಮಾರ್ ಕೋಡಿಕಲ್ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು, ಮಠದ ಟ್ರಸ್ಟಿಗಳು ಹಾಗು ಕರ್ನಾಟಕದ ವಿವಿದ ಭಾಗದ ಅನೇಕ ಗಣ್ಯರು ಉಪಸ್ಥಿತರಿದ್ದರು

About Post Author

error: