
ಬೈಲಹೊಂಗಲ ; ಸ್ವೀಪ್ ಸಮೀತಿ ಬೈಲಹೊಂಗಲ ಹಾಗೂ ತಾಲೂಕಾ ಆಡಳಿತ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ಬೈಲಹೊಂಗಲ ನಗರದಲ್ಲಿ ಮ್ಯಾರಥಾನ ಓಟ ವನ್ನು ಆಯೋಜನೆ ಮಾಡಿದ್ದು ಸ್ವೀಪ್ ಸಮೀತಿ ಅಧ್ಯಕ್ಷರು ಶ್ರೀ ಗಂಗಾಧರ ಕಂದಕೂರ ರವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆಯನ್ನು ನೀಡಿದರು.

ಚನ್ನಮ್ಮ ಮಹಾಧ್ವಾರದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಜವಳಿ ಕೂಟದ ಮೂಲಕ ಇಂದಿರಾನಗರದವರೆಗೆ ಮ್ಯಾರಥಾನ ಓಟವನ್ನು ಆಯೋಜಿಸಲಾಗಿದ್ದು ಈ ನಗರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಉದ್ದೇಶದಿಂದ ಈ ಮ್ಯಾರಥಾನ ಮೂಲಕ ಪ್ರಸ್ತುತ ಇರುವ ಚುನಾವಣೆಯಲ್ಲಿ ಎಲ್ಲ ಮತದಾರರು ಮತದಾನವನ್ನು ಮಾಡುವ ಸಲುವಾಗಿ ಓಟವನ್ನು ಆಯೋಜಿಸಲಾಗಿತ್ತು.
ಸೀಪ್ ಸಮೀತಿ ಅಧ್ಯಕ್ಷರು ಮಾತನಾಡಿ, ಇಂದಿರಾನಗರದ ನಿವಾಸಿಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಅತೀ ಕಡಿಮೆ ಮಾಡಿದ್ದು ಆದ್ದರಿಂದ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಮತಗಟ್ಟೆಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಮತವನ್ನು ಹಾಕುವ ಮೂಲಕ ಪ್ರತಿಶತ 100% ರಷ್ಟು ಆಗುವಂತೆ ಶ್ರಮೀಸಬೇಕೆಂದರು.

ಪುರಸಭೆಯ ಮುಖ್ಯಾಧಿಕಾರಿ ವಿರೇಶ ಹಸಬಿ, ಸಹಾಯಕ ನಿರ್ದೇಶಕ ವಿಜಯ ಪಾಟೀಲ, ಸಂಗಮೇಶ ಸವದತ್ತಿಮಠ ದೈಹಿಕ ಪರಿವೀಕ್ಷಕರು, ಎಸ್ ಜಿ ಹೊರಟ್ಟಿ, ಎಸ್ ಬಿ ಸಂಗನಗೌಡರ, ಎಸ್ ವ್ಹಿ ಹಿರೇಮಠ, ಎ ಬಿ ಅಂಗಡಿ ಮತ್ತು ಸ್ಕೌಟ್ಸ್ ಗೈಡ್ಸ್ ತಂಡದವರು ಹಾಗೂ ತಾಪಂ ಸಿಬ್ಬಂದಿ ವರ್ಗದವರು, ನರೇಗಾ ಸಿಬ್ಬಂದಿಗಳು, ಪುರಸಭೆಯ ಸಿಬ್ಬಂದಿಗಳು, ಶಿಕ್ಷಣ ಇಲಾಖೆಯ ಶಿಕ್ಷಕ ವೃಂದ ಮತ್ತು ಸಾರ್ವಜನಿಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮ್ಯಾರಥಾನ ಓಟದಲ್ಲಿ ವಿಜೇತರಿಗೆ ಪ್ರಶಸ್ತಿ ಮತ್ತು ಸನ್ಮಾನವನ್ನು ಸ್ವೀಪ್ ಸಮೀತಿವತಿಯಂದ ನೀಡಿ ಗೌರವಿಸಲಾಯಿತು.
ವರದಿ ; ಭಾವನಾ ಟಿವಿಗಾಗಿ ಮಹೇಶ ಶರ್ಮಾ
More Stories
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ