May 4, 2024

Bhavana Tv

Its Your Channel

ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ, ಅಕ್ಷರ ಭರಿತ ಜನಾಂಗ ಸರಕಾರದ ಗುರಿ: ಬೊಮ್ಮಾಯಿ

ಕಾರ್ಕಳ: ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ವಿದ್ಯಾರ್ಜನೆ ಮಾಡುವ ಸಂದರ್ಭ ಮಕ್ಕಳಿಗೆ ಸೂಕ್ತ ವಾತಾವರಣ ನಿರ್ಮಿಸುವುದು ಅಗತ್ಯ. ಮಕ್ಕಳ ಭವಿಷ್ಯ ರೂಪಿಸಲೆಂದು ಸರಕಾರ ಹಾಸ್ಟೇಲ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಅಕ್ಷರ ಭರಿತ ಮುಂದಿನ ಜನಾಂಗ ನಿರ್ಮಿಸುವುದು ಸರಕಾರದ ಗುರಿ ಎಂದು ಉಸ್ತುವಾರಿ, ಗೃಹ ಸಚಿವ ಬಸವಾರ್ ಬೊಮ್ಮಾಯಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಅನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಸೋಮವಾರ ಉದ್ಘಾಟಿಸಿ, ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಶಿಕ್ಷಿತರಾದರೆ ದೇಶ ಅಭಿವೃದ್ಧಿ ಗೊಂಡoತೆ. ಹೆಣ್ಣು ಕುಟುಂಬದ ತಾಯಿ, ಮಗಳು, ಪೋಷಕಿ, ಗುರುವೂ ಆಗಿರುವಳು ಸಮಾಜದ ನಿರ್ಮಾಣದಲ್ಲಿ ಆಕೆ ಪಾತ್ರ ಹಿರಿದು ಎಂದರು. ವಿಜ್ಞಾನ, ಗಣಿತ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಮುಂದಿನ ಜನಾಂಗ ಅಕ್ಷರಭರಿತವಾಗಿ ರೂಪಿತವಾಗಬೇಕು ಎಂದ ಅವರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನೀಲ್‌ಕುಮಾರ್ ಹಳೆಯ ಕಟ್ಟಡಗಳನ್ನು ಸುಸಜ್ಜಿತಗೊಳಿಸಿ ಹೊಸ ಸ್ಪರ್ಶ ಕೊಡುವ ಕೆಲಸ ಕಳೆದ ಮೂರು ವರ್ಷಗಳಿಂದ ನಡೆದಿದೆ ಎಂದರು.
ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ ಸಿಇಒ ಡಾ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ, ನಕ್ಸಲ್ ವಿಭಾಗದ ವರಿಷ್ಠಾಧಿಕಾರಿ ನಿಖಿಲ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ತಹಶೀಲ್ದಾರ್ ಪುರಂದರ ಹೆಗ್ಡೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ವಿ ಮಡ್ಲೂರ್, ಜಿಲ್ಲಾ ನಿರ್ಮಿತ ಕೇಂದ್ರ ಯೋಜನಾ ನಿರ್ದೇಶಕ ಅರುಣ್‌ಕುಮಾರ್, ಯೋಜನಾ ಅಭಿಯಂತರ ಪವನ್, ನಿಲಯ ಮೇಲ್ವಿಚಾರಕಿ ಎಚ್ ಎನ್ ನಾಗಶ್ರೀ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ, ಎಸ್. ವಿಜಯಕುಮಾರ್ ಸ್ವಾಗತಿಸಿದರು. ನವೀನ್ ನಾಯಕ್ ನಿರೂಪಿಸಿದರು.
ವರದಿ ; ಅರುಣ ಭಟ್, ಕಾರ್ಕಳ

error: