ಮಳವಳ್ಳಿ : ತಾನು ಕಳೆದ ಭಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾತ್ರ ಮಾಡಲು ಮಾತ್ರ ಸಾಧ್ಯವಾಯಿತು, ಆದರೆ ಅಂಗನವಾಡಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ವಳ ಮಾಡಲು ಸಾಧ್ಯವಾಗದ ಕುರಿತು ಕಾರ್ಯಕರ್ತೆಯರ ಕ್ಷಮೆ ಯಾಚಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬರುವ ೨೦೨೩ರ ಚುನಾವಣೆ ನಂತರ ರಾಜ್ಯದಲ್ಲಿ ಉತ್ತಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಆಗ ನಿಮ್ಮ ಬೇಡಿಕೆಗಳು ಖಂಡಿತ ಈಡೇರಲಿವೆ ಎಂದು ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ತಾನೆ ಎಂಬುದನ್ನು ಪರೋಕ್ಷವಾಗಿ ಸಾರಿದ್ದಾರೆ.
ಮಳವಳ್ಳಿ ಪಟ್ಟಣದ ಕನಕದಾಸ ಕ್ರೀಡಾಂಗಣದಲ್ಲಿ ಇಂದು ಶಾಸಕ ಡಾ ಕೆ ಅನ್ನದಾನಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕರೋನ ವಾರಿಯರ್ಸ್ಗಳಾದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಂಗವಿಕಲರು ಕೆಎಸ್ಆರ್ಟಿಸಿ ನೌಕರರು ಸೇರಿದ ವಿವಿಧ ವರ್ಗದ ಜನರಿಗೆ ಬೃಹತ್ ಸಂಖ್ಯೆಯಲ್ಲಿ ಆಹಾರದ ಕಿಟ್ ವಿತರಣೆಗೆ ಚಾಲನೆ ನೀಡಿ ಜೊತೆಗೆ ಶಾಸಕರ ನಿಧಿಯಿಂದ ನೀಡಿದ ಎರಡು ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದ ಅವರು ಕಳೆದ ಸರ್ಕಾರದಲ್ಲಿ ಬೆಂಬಲ ನೀಡಿದ್ದ ಪಕ್ಷದ ಹಿಂದಿನ ಕಾರ್ಯಕ್ರಮಗಳಿಗೆ ಹಣ ಒದಗಿಸುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡಲಷ್ಟೇ ಸಾಧ್ಯವಾಯಿತು ನನಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದರೆ ಖಂಡಿತ ನಿಮ್ಮ ಬೇಡಿಕೆಗಳನ್ನು ಅಂದೇ ಈಡೇರಿಸುತ್ತಿದ್ದೆ ಎಂದು ಹೇಳಿ ಇದಕ್ಕಾಗಿ ಕಾರ್ಯಕರ್ತೆಯರ ಕ್ಷಮೆ ಯಾಚಿಸಿದರು.
ಇದೀಗ ಯಾರಾರೋ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಕೂಗೆಬ್ಬಿಸುತ್ತಿದ್ದು ಆದರೆ ಮುಂದೆ ಉತ್ತಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಆಗ ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಡಾ ಕೆ ಅನ್ನದಾನಿ ಅವರು ತಾಲೂಕಿನಲ್ಲಿ ವೇಶ್ಯಾವಾಟಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಹೇಳುವ ಮೂಲಕ ಮಾಜಿ ಶಾಸಕರು ತಾಲ್ಲೂಕಿನ ಸಹೋದರಿ ತಾಯಂದಿರಿಗೆ ಅಪಮಾನ ಮಾಡಿದ್ದಾರೆ ಎಂದು ನರೇಂದ್ರಸ್ವಾಮಿ ವಿರುದ್ದ ಹರಿಹಾಯ್ದಿದರು. ಇದಲ್ಲದೆ ಬೆಂಗಳೂರಿನ ಹೋಟೆಲ್ ಗಳಲ್ಲಿ ಜೂಜಾಟದಲ್ಲಿ ಕಾಲ ಕಳೆಯುತ್ತಿದ್ದ ಈ ನಾಯಕರು ಮಳವಳ್ಳಿ ಸುತ್ತಮುತ್ತ ಜೂಜು ಅಡ್ಡೆ ನಡೆಯುತ್ತಿದೆ ಎಂದು ಅರೋಪಿಸಿರುವುದು ಹಾಸ್ಯಾಸ್ಪದವಾಗಿದ್ದು ತಾನು ಎಲ್ಲಾದರೂ ಇಸ್ಪೇಟ್ ಆಡುವುದನ್ನು ಸಾಬೀತು ಪಡಿಸಿದರೆ ನನ್ನ ಒಂದು ಕೈಯನ್ನು ಕತ್ತರಿಸಿಕೊಳ್ಳುವುದಾಗಿ ಬಹಿರಂಗ ಸವಾಲು ಹಾಕಿದರು. ಕೋವಿಡ್ಗೆ ಸರ್ಕಾರ ನೀಡಿದ್ದ ಹಣದಲ್ಲಿ ಒಂದು ರೂ ದುರುಪಯೋಗ ಪಡಿಸಿ ಕೊಂಡಿಲ್ಲ ಎಂದು ಕೈಮೇಲೆ ಕರ್ಪೂರ ಹಚ್ಚಿ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ ಶಾಸಕರು ತನ್ನ ವಿರುದ್ದ ಸುಳ್ಳು ಆರೋಪ ಮಾಡಿರುವ ಮಾಜಿ ಶಾಸಕರು ಇದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಕಳೆದ ಎರಡು ತಿಂಗಳಿAದ ಮಳವಳ್ಳಿಯಲ್ಲೇ ಇದ್ದು ಕರೋನ ಸೋಂಕಿತರ ಜೊತೆ ನಿರಂತರ ಸಂಪರ್ಕದೊAದಿಗೆ ಅವರ ಗುಣಪಡಿಸಲು ತಾಲ್ಲೂಕು ಆಡಳಿತದೊಂದಿಗೆ ನಿರಂತರ ಶ್ರಮ ವಹಿಸಿದ್ದೇನೆ, ಲಾಕ್ ಡೌನ್ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಜನರಿಗೆ ನಿರಂತರವಾಗಿ ಆಹಾರದ ಕಿಟ್ಗಳನ್ನು ವಿತರಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ ಆದರೆ ತಮ್ಮ ಸ್ವ ಗ್ರಾಮದಲ್ಲಿ ೩೦ ಜನರಿಗೆ ಸೋಂಕು ದೃಡಪಟ್ಟ ಸುದ್ದಿ ತಿಳಿದು ರಾತ್ರ್ರೋ ರಾತ್ರಿ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಹಾರಿದ ಗಿರಾಕಿ ಈಗ ಬಂದು ಕಳಪೆ ಆಹಾರ ಔಷಧಿ ಎಂದು ಬೊಬ್ಬೆ ಹೊಡೆಯುತ್ತಾರೆ ಎಂದು ಲೇವಡಿ ಮಾಡಿದರು
ಈ ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಾಜಿ ಸದಸ್ಯರಾದ ಅಪ್ಪಾಜಿಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್, ಜಿ ಪಂ ಮಾಜಿ ಸದಸ್ಯ ರವಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಪುರಸಭಾಧ್ಯಕ್ಷೆ ರಾಧ ನಾಗರಾಜು , ಉಪಾಧ್ಯಕ್ಷ ನಂದಕುಮಾರ್, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತ ರಿದ್ದರು,
ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ವೈದ್ಯರನ್ನು ಸನ್ಮಾನಿಸಲಾಯಿತು
ವರದಿ ಮಲ್ಲಿಕಾರ್ಜುನ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ