March 12, 2025

Bhavana Tv

Its Your Channel

ಹೋರಿಯನ್ನು ಹಿಂಸಾತ್ಮಕವಾಗಿ ತುಂಬಿಸಿಕೊoಡು ಬರುತ್ತಿದ್ದ ಮಾರುತಿ ಓಮಿನಿ , ವಾಹನ ಸಮೇತ ಆರೋಪಿಯ ಬಂಧನ

ಭಟ್ಕಳ: ಹೋರಿಯೊಂದನ್ನು ಹಿಂಸಾತ್ಮಕವಾಗಿ ತುಂಬಿಸಿಕೊoಡು ಮುರುಡೇಶ್ವರಕ್ಕೆ ಬರುತ್ತಿದ್ದ ಮಾರುತಿ ಓಮಿನಿ ಕಾರನ್ನು ತಡೆದ ಪೊಲೀಸರು, ವಾಹನದ ಸಮೇತ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬೈಲೂರು ದೊಡ್ಡಬಲಸೆ ಸೇತುವೆ ಸಮೀಪ ನಡೆದಿದೆ.

ಬಂಧಿತ ಆರೋಪಿಯನ್ನು ತಾಲೂಕಿನ ಮುರುಡೇಶ್ವರ ನ್ಯಾಶನಲ್ ಕಾಲೋನಿಯ ನಿವಾಸಿ ಮಹ್ಮದ್ ಫರ್ವೇಜ್ ಎಂದು ಗುರುತಿಸಲಾಗಿದೆ.ಈತ ತೂದಳ್ಳಿಯಿಂದ ಮುರುಡೇಶ್ವರಕ್ಕೆ ಹೋರಿಯನ್ನು ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಜಪತ್ತುಪಡಿಸಿಕೊಂಡಿರುವ ಹೋರಿಯ ಮೌಲ್ಯ ರು.೨೦೦೦ ಎಂದು ಅಂದಾಜಿಸಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ರವೀಂದ್ರ ಬಿರಾದಾರ ತನಿಖೆ ಕೈಗೊಂಡಿದ್ದಾರೆ.

error: