ತುಮಕೂರ: ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಜೀವಿಕ ಸಂಘಟನೆಯಿAದ ಕೊರೋನಾ ಹೆಸರಿನಲ್ಲಿ ಸಾಮಾಜಿಕ ಅಂತರ ಪದ ಬಳಕೆ ಬೇಡ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಕೊರೋನಾ ಎಂಬ ಸಾಂಕ್ರಾಮಿಕ ರೋಗ ಎಂಬ ಹೆಸರಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತನಾಡುತ್ತಿದ್ದಾರೆ. ಇದು ಕಾಯ್ದೆಯಲ್ಲಿ ಒಂದು ಅಸ್ಪೃಶ್ಯತೆಯ ಎಸ್‌ಸಿ ಎಸ್‌ಟಿಗಳಿಗೆ ಜಾತಿ ನಿಂದನೆ ಪದವಾಗಿದೆ, ಈ ಪದವನ್ನು ಇಂದಿನಿAದಲೇ ತೆಗೆದು, ದೈಹಿಕ ಅಂತರ ಪದ ಬಳಕೆ ಮಾಡಿ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈ ಪದವನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ, ಒಂದು ವೇಳೆ ಈ ಪದ ಬಳಕೆ ಮಾಡದಿದ್ದರೆ, ಎಸ್‌ಸಿ ಎಸ್‌ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಕರ್ನಾಟಕ ದಲಿತ ಸಮಿತಿ ಮತ್ತು ಜೀವಿಕ ಸಂಘಟನೆಯಿAದ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ನ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿ ಮಯ್ಯ, ಜೀವಿಕ ಸಂಘಟನೆಯ ತಾಲೂಕು ಸಂಚಾಲಕ ಮಂಜುನಾಥ್,ಜಿಲ್ಲಾ ಡಿಎಸ್‌ಎಸ್ ಕಲಾಮಂಡಳಿ ಸಂಚಾಲಕ ಸಿದ್ದಾಪುರ ಸಂಜೀವಯ್ಯ, ತಾಲೂಕು ಡಿಎಸ್‌ಎಸ್ ಸಂಚಾಲಕ ದೊಡ್ಡೇರಿ ಶಿವಣ್ಣ, ಜೀವಿಕ ಸಂಘಟನೆಯ ಮಹಿಳಾ ಸಂಚಾಲಕಿ ಚಿಕ್ಕಮ್ಮ ಮತ್ತಿತರರಿದ್ದರು.
ವರದಿ: ಮಧು ತುಮಕೂರು
More Stories
ತುಮಕೂರಿನ ಮಹಿಳಾ ವಿದ್ಯುತ ಗುತ್ತಿಗೆದಾರರಾದ ಸುಪ್ರಿಯಾರವರಿಗೆ ಸನ್ಮಾನ
ಪುನೀತ್ ರಾಜಕುಮಾರ್ ನೂತನ ಕ್ಯಾಲೆಂಡರ್ ಹಂಚಿಕೆ
ಸೋಲಾರ್ ಪಾರ್ಕ್ ಗೆ ಭೇಟಿ ನೀಡಿದ ಸಚಿವ ವಿ. ಸುನೀಲ್ ಕುಮಾರ್