December 20, 2024

Bhavana Tv

Its Your Channel

ಇಟ್ಟಿಗೆ ಗೂಡು ಕುಸಿದು ಕೂಲಿ ಕಾರ್ಮಿಕನೋರ್ವ ಸಾವು

ಮಳವಳ್ಳಿ : ಇಟ್ಟಿಗೆ ಗೂಡು ಕುಸಿದು ಕೂಲಿ ಕಾರ್ಮಿಕನೋರ್ವ ಮೃತಪಟ್ಟಿದ್ದು ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ದುರ್ಘಟನೆಯೊಂದು ತಾಲೂಕಿನ ಬಿ ಜಿ ಪುರ ಗ್ರಾಮದಲ್ಲಿ ನಡೆದಿದೆ
ಈ ಗ್ರಾಮದ ೪೦ ವರ್ಷ ವಯಸ್ಸಿನ ಲಕ್ಷ್ಮಣ ಎಂಬಾತನೇ ಮೃತಪಟ್ಟ ದುರ್ದೈಯಾಗಿದ್ದು ಇದೇ ಗ್ರಾಮದ ಸೋಮೇಶ್, ರಾಜೇಂದ್ರ ಪ್ರಸಾದ್, ರವಿ ಇವರುಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ನೆನ್ನೆ ರಾತ್ರಿ ೭ ಗಂಟೆ ಸಮಯದಲ್ಲಿ ಈ ಗ್ರಾಮದ ಸುತ್ತಮುತ್ತ ಮಳೆ ಸುರಿಯುತ್ತಿದ್ದು ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಈ ನಾಲ್ವರು ಮಳೆಯಿಂದ ರಕ್ಷಣೆ ಪಡೆಯಲು ಇಟ್ಟಿಗೆ ಗೂಡಿನ ಮಗ್ಗುಲಲ್ಲಿ ನಿಂತಿದ್ದಾಗ ಮಳೆಯಲ್ಲಿ ಮೊದಲೇ ನೆನೆದಿದ್ದ ಹಸಿ ಇಟ್ಟಿಗೆಯ ಗೂಡು ಒಂದು ಭಾಗ ಕುಸಿದು ಇವರ ಮೇಲೆ ಉರುಳಿ ಬಿತ್ತೆನ್ನಲಾಗಿದೆ.


ಇಟ್ಟಿಗೆ ಗೂಡಿನ ಅಡಿಗೆ ಸಿಕ್ಕ ನಾಲ್ವರ ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಕೂಡಲೇ ಕಾರ್ಮಿಕರನ್ನು ಹೊರಗೆಳೆದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಲಕ್ಷ್ಮಣ ಸಾವನ್ನಪ್ಪಿದ್ದು ಉಳಿದ ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿ ಇರುವ ಸೋಮೇಶ ಅವರನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ಸಾಗಿಸಲಾಗಿದ್ದು ರಾಜೇಂದ್ರ ಪ್ರಸಾದ್ ಹಾಗೂ ರವಿ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: