ಮಳವಳ್ಳಿ : ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಪ್ರವಾಹೋಪಾದಿಯಲ್ಲಿ ಹರಿದ ಚರಂಡಿ ನೀರು ಮಳವಳ್ಳಿ ಪಟ್ಟಣದ ಹಲವಾರು ಅಂಗಡಿಗಳಿಗೆ ನುಗ್ಗಿದ ಪರಿಣಾಮ ಅಂಗಡಿಗಳು ಜಲಾವೃತವಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿರುವ ಪ್ರಸಂಗ ಜರುಗಿದೆ.
ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ರಸ್ತೆ ಚರಂಡಿಗಳೆಲ್ಲಾ ಜಲಾವೃತವಾಗಿದ್ದು ಈ ನಡುವೆ ಪಟ್ಟಣದ ಮೈಸೂರು ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕ್ ಪಕ್ಕ ವಾಣಿಜ್ಯ ಮಳಿಗೆಯೊಂದು ನಿರ್ಮಾಣವಾಗುತ್ತಿದ್ದು ಸದರಿ ನಿವೇಶನದ ಒಳ ಭಾಗಕ್ಕೆ ಲಾರಿ ಹೋಗುವ ಸಲುವಾಗಿ ಚರಂಡಿಗೆ ಮಣ್ಣು ಮುಚ್ಚಿದ್ದೇ ಈ ಭಾರಿ ಅನಾಹುತಕ್ಕೆ ಕಾರಣ ಎನ್ನಲಾಗಿದೆ.
ಚರಂಡಿಯಲ್ಲಿ ಸರಾಗವಾಗಿ ಹೋಗಬೇಕಾದ ನೀರು ರಸ್ತೆಗೆ ನುಗ್ಗಿ ರಸ್ತೆಯಿಂದ ತಗ್ಗಿನಲ್ಲಿದ್ದ ಅಂಗಡಿಗಳಿಗೆ ನುಗ್ಗಿದ್ದು ಇದರಿಂದ ಈ ಭಾಗದ ಬಟ್ಟೆ ಅಂಗಡಿ, ಹಾಸಿಗೆ ಅಂಗಡಿ, ಬುಕ್ ಸ್ಟೋರ್, ಮೆಡಿಕಲ್ ಸ್ಟೋರ್ , ಚಪ್ಪಲಿ ಅಂಗಡಿಗಳು ಜಲಾವೃತವಾಗಿ ರುವುದರ ಜೊತೆಗೆ ಅಂಗಡಿ ತುಂಬ ಕೆಸರು ತುಂಬಿಕೊAಡು ಅಂಗಡಿಯಲ್ಲಿನ ಭಾರಿ ಮೌಲ್ಯದ ಬಟ್ಟೆಗಳು, ಹಾಸಿಗೆಗಳು, ಸ್ಟೇಷನರಿ ಪದಾರ್ಥಗಳೆಲ್ಲಾ ನೀರು ಪಾಲಾಗಿದ್ದು ಹತ್ತಾರು ಲಕ್ಷರೂ ಮೌಲ್ಯದ ನಷ್ಟ ಉಂಟಾಗಿದೆ.
ಇAದು ಬೆಳಿಗ್ಗೆ ಎಂದಿನAತೆ ಅಂಗಡಿ ಬಾಗಿಲು ತೆಗೆದ ಮಾಲೀಕರು ಇಡೀ ಅಂಗಡಿ ಜಲಾವೃತವಾಗಿರುವುದರ ಜೊತೆಗೆ ಕೆಸರು ತುಂಬಿಕೊAಡಿರುವುದನ್ನು ಕಂಡು ಹೃದಯವೇ ಬಾಯಿಗೆ ಬಂದAತಾಗಿತ್ತು.
ಜೊತೆಗೆ ಅಂಗಡಿಯಲ್ಲಿನ ಬಹುತೇಕ ಪದಾರ್ಥಗಳ ಜೊತೆ ಕೆಲ ಅಂಗಡಿಗಳ ಎಲೆಕ್ಟ್ರಿಕ್ ಪದಾರ್ಥಗಳು ಸಹ ಹಾಳಾಗಿದ್ದು ಒಂದು ಅಂದಾಜಿನ ಪ್ರಕಾರ ೨೦ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಅಂಗಡಿ ಯನ್ನು ಸ್ವಚ್ಚ ಮಾಡುವುದರ ಜೊತೆಗೆ ಹಾಳಾಗಿರುವ ಪದಾರ್ಥಗಳ ಹೊರಹಾಕುತ್ತಿದ್ದ ಅಂಗಡಿ ಮಾಲೀಕರ ನೋವು ವೇದನೆ ಹೃದಯ ಹಿಂಡುವAತಿತ್ತು.
ಮತ್ತೊAದೆಡೆ ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ಇರುವ ಬಿಎಸ್‌ಎಲ್ ಕಚೇರಿ ಸಹ ಜಲಾವೃತವಾಗಿದ್ದು ಅಗ್ನಿಶಾಮಕ ಸಿಬ್ಬಂದಿ ನೀರನ್ನು ಹೊರ ಹಾಕಿದರು.
ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ