ಮಳವಳ್ಳಿ : ಕೆ.ಆರ್.ಎಸ್ ವಿಚಾರವನ್ನು ಮುಂದಿಟ್ಟುಕೊAಡು ಕ್ಷುಲ್ಲಕರಾಜಕಾರಣ ಮಾಡುವುದನ್ನು ಬಿಡಬೇಕೆಂದು ಶಾಸಕ ಡಾ. ಕೆ ಅನ್ನದಾನಿ ಅವರು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ತಾಕೀತು ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಕಳೆದ ಮೂರು ತಿಂಗಳಿoದ ಜಿಲ್ಲೆಯಲ್ಲಿ ಕೋವಿಡ್ ಹಾವಳಿಯಿಂದ ನೂರಾರು ಜನ ಸಾವನ್ನಪ್ಪಿದ್ದು ಸತ್ತವರ ಒಂದೇ ಒಂದು ಕುಟುಂಬವನ್ನು ಅವರಿಗೆ ಸಾಂತ್ವಾನ ಹೇಳದ ಸಂಕಷ್ಟದಲ್ಲಿರುವ ಜಿಲ್ಲೆಯ ಜನರಿಗೆ ಕನಿಷ್ಠ ಸಹಾಯವನ್ನು ಸಹ ಮಾಡದ ಇವರು ಜನ ತನ್ನ ವಿರುದ್ದ ಸುದ್ದಿ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಧಾನ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಿ ಜನರ ಗಮನವನ್ನು ಬೇರೆಡೆ ಸೆಳೆಯಲು ಕೆ ಆರ್ ಎಸ್ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಇವರ ಕ್ಷುಲ್ಲಕ ರಾಜಕಾರಣಕ್ಕೆ ಸಾಕ್ಷಿ ಯಾಗಿದ್ದು ಇದನ್ನೇ ಕುಮಾರಸ್ವಾಮಿ ಅವರು ಹಳ್ಳಿಯ ಹಾಡು ಭಾಷೆಯಲ್ಲಿ ಬಿರುಕು ಮುಚ್ಚಲು ಅಡ್ಡಡ್ಡ ಮಲಗಿ ಎಂದು ಹೇಳಿದ್ದಾರೆ ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು ಸುಮಲತಾ ಅವರು ಹೆಣ್ಣು ಎಂಬುದು ಅಂಬರೀಶಣ್ಣನಿಗೂ ಗೊತ್ತು ಕುಮಾರಸ್ವಾಮಿ ಅವರಿಗೂ ಗೊತ್ತು ಇಡೀ ದೇಶಕ್ಕೆ ಗೊತ್ತು ತನ್ನಂತ ಹೆಣ್ಣು ಮಗಳ ಬಗ್ಗೆ ಕುಮಾರಸ್ವಾಮಿ ಅವಾಚ್ಯ ಶಬ್ದ ಗಳಿಂದ ಟೀಕಿಸಿದ್ದಾರೆ ಎಂಬುದು ಅರ್ಥ ಹೀನವಾಗಿದ್ದು ದೇವೇಗೌಡರ ಕುಟುಂಬ ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ನೀಡುತ್ತದೆ ಎಂಬುದು ಇಡೀ ನಾಡಿಗೆ ಗೊತ್ತಿರುವ ವಿಚಾರ ಎಂದು ತಿಳಿಸಿದರು.
ಒಂದು ವೇಳೆ ಕೆ ಅರ್ ಎಸ್ ಬಿರುಕು ಬಿಟ್ಟಿದ್ದರೆ ಈ ವಿಚಾರವನ್ನು ಸಂಸತ್ನಲ್ಲಿ ಚರ್ಚೆ ಮಾಡಿ ಅದರ ದುರಸ್ಥಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆ ಹೊರತು ಹಾದಿಬೀದಿಯಲ್ಲಿ ಚರ್ಚೆ ಮಾಡುವ ಜನರನ್ನು ಭಯಪಡಿಸುವ, ಭಾವನಾತ್ಮಕ ವಾಗಿ ಕೆರಳಿಸುವ ಕೆಲಸ ಮಾಡಬೇಡಿ, ಅಲ್ಲದೆ ಶಾಸಕರು ಮಾಡುವ ಕಾಮಗಾರಿ ಗುದ್ದಲಿ ಮಾಡುವುದನ್ನು ತಾನೇ ಮಾಡುವ ಸಣ್ಣತನದ ರಾಜಕಾರಣ ಬಿಟ್ಟು ದೇವೇಗೌಡರ ಕಾಲದಲ್ಲಿ ಸರ್ವೆ ಯಾಗಿರುವ ಬೆಂಗಳೂರು ಕನಕಪುರ ಮಳವಳ್ಳಿ ಮಾರ್ಗದ ರೈಲು ಮಾರ್ಗಕ್ಕೆ ಕಂಬಿ ಹಾಕಿಸುವ ಕೆಲಸ ಮಾಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಪುರಸಭೆ ಉಪಾಧ್ಯಕ್ಷ ಟಿ ನಂದಕುಮಾರ್ ಮುಖಂಡರಾದ ಶಂಕರೇಗೌಡ, ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಹಾಜರಿದ್ದರು.
ವರದಿ : ಬಿ ಮಲ್ಲಿಕರ್ಜುನಸ್ವಾಮಿ, ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ