
ಭಟ್ಕಳ: ಬೆಳ್ಕೆ ಶ್ರೀ ವೀರಮಾರುತಿ ದೇವಸ್ಥಾನದ ಆಡಳಿತ ಮಂಡಳಿ, ತಾಲೂಕು ಆಸ್ಪತ್ರೆ ಭಟ್ಕಳ ಹಾಗೂ ಉಡುಪಿ ರಕ್ತನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಡಿಗದ್ದೆಯ ಶ್ರೀ ಮಹಾಸತಿ ಅನ್ನದಾನ ಛತ್ರದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು
ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಬೆಳಿಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದರೂ ಸಹ ಜನರು ಗ್ರಾಮೀಣ ಭಾಗದಿಂದ ಬಂದು ರಕ್ತದಾನ ಮಾಡಲು ಉತ್ಸುಕರಾಗಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದ್ದು ರಕ್ತದಾನದ ಶ್ರೇಷ್ಟತೆಯನ್ನು ತೋರಿಸುತ್ತದೆ ಎಂದರು. ರಕ್ತದಾನಿಗಳನ್ನು ಅಭಿನಂದಿಸಿದ ಅವರು ಅನೇಕ ಸಂದರ್ಭದಲ್ಲಿ ನಿಮ್ಮ ಒಂದು ಯುನಿಟ್ ರಕ್ತ ಮೂರು ಜನರ ಜೀವ ಕಾಪಾಡಬಹುದು ಎಂದೂ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವೀರ ಮಾರುತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಂಜು ಎಂ. ಮೊಗೇರ ಅವರು ರಕ್ತದಾನ ಶಿಬಿರದ ಆಯೋಜನೆಯ ಹಿಂದಿರುವ ಉದ್ದೇಶವನ್ನು ವಿವರಿಸುತ್ತಾ ಸಹಕರಿಸಿದ ಆಡಳಿತ ಮಂಡಳಿ ಹಾಗೂ ಭಕ್ತವೃಂದ ಹಾಗೂ ರಕ್ತದಾನ ಶಿಬಿರ ಆಯೋಜನೆಗೆ ಸಹಕರಿಸಿದ ರಕ್ತನಿಧಿ ಉಡುಪಿ, ತಾಲೂಕಾ ಆಸ್ಪತ್ರೆ ಭಟ್ಕಳ ಮತ್ತು ಸೋಡಿಗದ್ದೆ ಶ್ರೀ ಮಹಾಸತಿ ಅನ್ನಛತ್ರವನ್ನು ನೀಡಿ ಸಹಕರಿಸಿದವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬೆಳ್ಕೆ ಮೊಗೇರ ಸಮಾಜದ ಅಧ್ಯಕ್ಷ ಶನಿಯಾರ ಮೊಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಹೃದ್ರೋಗ ತಜ್ಞ ಡಾ. ಯಜ್ಞೇಶ್ ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ