December 22, 2024

Bhavana Tv

Its Your Channel

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಡಾ. ಕೆ ಅನ್ನದಾನಿ

ಮಳವಳ್ಳಿ : ಮಳವಳ್ಳಿ ಯಿಂದ ಹಿಟ್ಟಿನಹಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಐತಿಹಾಸಿಕವಾದ ಸುಲ್ತಾನ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಕೆ ಅನ್ನದಾನಿ ಚಾಲನೆ ನೀಡಿದರು.
ತಾಲ್ಲೂಕಿನ ಕೋರೇಗಾಲ ಗೇಟ್ ಬಳಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಅನ್ನದಾನಿ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಹಂತ ಹಂತವಾಗಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಇಂದು ಶೆಟ್ಟಹಳ್ಳಿ ಗೇಟ್ ನಿಂದ ಬಂಡೂರು ವರೆಗೆ ಒಟ್ಟು ೫ ಕಿ ಮೀ ರಸ್ತೆಯನ್ನು ೨.೮೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಲಾಗುತ್ತಿದೆ ಎಂದು ತಿಳಿಸಿದರು.
ವಿ ಸಿ ನಾಲೆಯ ಕೊನೆ ಭಾಗವಾದ ಮಳವಳ್ಳಿ ತಾಲ್ಲೂಕಿಗೆ ವ್ಯವಸಾಯಕ್ಕೆ ನೀರಿನ ಕೊರತೆ ಬಹು ದೊಡ್ಡ ಸಮಸ್ಯೆಯಾಗಿದ್ದು ಇದನ್ನು ಮನಗಂಡ ಹಿಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈ ಭಾಗದ ನಾಲೆಗಳ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರು ಮಾಡಿದ್ದರಾದರೂ ಕೆಲ ಕಾರಣಗಳಿಂದ ಈ ಹಣ ಇನ್ನೂ ಬಿಡುಗಡೆ ಆಗಿಲ್ಲ ಎಂದು ಹೇಳಿದ ಅವರು ಈ ಕುರಿತು ಸರ್ಕಾರಕ್ಕೆ ಮತ್ತೊಮ್ಮೆ ಒತ್ತಾಯ ಮಾಡಿ ಹಣ ಬಿಡುಗಡೆ ಮಾಡಿಸಿ ನಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸುವು ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಪುಟ್ಟಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಮುಖಂಡರಾದ ವೆಂಕಟೇಗೌಡ, ಹೆಚ್ ಪುಟ್ಟಸ್ವಾಮಿ ಶಿವರಾಜು, ಚೆನ್ನಬಸವಯ್ಯ ವೃಷಬೇಂದ್ರಪ್ಪ, ಶಿವರಾಮು ಮತ್ತಿತರರು ಉಪಸ್ಥಿತರಿದ್ದರು

error: