December 22, 2024

Bhavana Tv

Its Your Channel

ಟೆಂಪೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಮಚ್ಚು ಲಾಂಗ್ ನಿಂದ ಕೊಚ್ಚಿ ಬರ್ಭರವಾಗಿ ಹತ್ಯೆ

ಮಳವಳ್ಳಿ : ಟಿಂಪೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಮಚ್ಚು ಲಾಂಗ್ ನಿಂದ ಕೊಚ್ಚಿ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಕೃತ್ಯವೊಂದು ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಜರುಗಿದೆ.
ಮಳವಳ್ಳಿ ಪಟ್ಟಣದ ಎನ್ ಇ ಎಸ್ ಬಡಾವಣೆಯ ವಾಸಿ ಸಿದ್ದರಾಚೇಗೌಡ ಎಂಬುವರ ಮಗನಾದ ರಾಜು ಎಂಬಾತನೇ ಕೊಲೆಯಾಗಿರುವ ಟೆಂಪೋ ಚಾಲಕನಾಗಿದ್ದು ೩೩ ವರ್ಷ ವಯಸ್ಸಿನ ಈತ ಅವಿವಾಹಿತನಾಗಿದ್ದು ತನ್ನದೇ ಟೆಂಪೋ ಇಟ್ಟುಕೊಂಡು ಮಳವಳ್ಳಿ – ಹಲಗೂರು ಮಾರ್ಗದಲ್ಲಿ ಪ್ರಯಾಣಿಕರನ್ನು ಸಾಗಿಸುವು ದರ ಜೊತೆಗೆ ಬೆಳಿಗ್ಗೆ ಸಾಯಂಕಾಲ ಬಾಣಸಮುದ್ರ ಬಳಿಯ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಎಂದು ಗೊತ್ತಾಗಿದೆ.
ನಿನ್ನೆ ಮಂಗಳವಾರ ಸಂಜೆ ಸಹ ಫ್ಯಾಕ್ಟರಿ ನೌಕರರನ್ನು ಸಾಗಿಸಿದ ನಂತರ ಹಲಗೂರಿನಿಂದ ಮಳವಳ್ಳಿ ಕಡೆಗೆ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಹಲಗೂರಿನ ಬಸ್ ನಿಲ್ದಾಣದ ಬಳಿ ತನ್ನ ಟೆಂಪೋ ನಿಲ್ಲಿಸಿಕೊಂಡು ಕಾಯುತ್ತಿದ್ದಾಗ ರಾತ್ರಿ ೮ ಗಂಟೆ ಸಮಯದಲ್ಲಿ ಟೆಂಪೋ ಬಳಿಯಿಂದ ಮುತ್ತತ್ತಿ ರಸ್ತೆಯಲ್ಲಿರುವ ಮಾಸ್ತಮ್ಮನ ಗುಡಿ ಬಳಿ ಕರೆದೊಯ್ದಿರುವ ದುಷ್ಕರ್ಮಿಗಳು ಮಚ್ಚು ಲಾಂಗ್ ನಿಂದ ಆತನ ಕುತ್ತಿಗೆ ಮುಖದ ಭಾಗವನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಈತನ ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಈ ನಡುವೆ ಮಂಗಳವಾರ ಶಿವನ ಸಮುದ್ರ ಬಳಿಯ ಮಾರಮ್ಮನ ದೇವಸ್ಥಾನದಲ್ಲಿ ಏರ್ಪಾಡಾಗಿದ್ದ ಊಟಕ್ಕೆ ತೆರಳಿದ್ದ ವೇಳೆ ಸ್ನೇಹಿತರ ನಡುವೆ ಜಗಳ ಗಲಾಟೆ ನಡೆದು ಇದು ವಿಕೋಪಕ್ಕೆ ಹೋಗಿತ್ತು ಎನ್ನಲಾಗಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿ ದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ : ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ

error: