December 22, 2024

Bhavana Tv

Its Your Channel

ದಿವಂಗತ ಎಂ ವಿ ಸುಬ್ರಹ್ಮಣ್ಯ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಮಳವಳ್ಳಿ : ನಾಡಿನ ಹೆಸರಾಂತ ಪ್ರಮುಖ ಸಾರಿಗೆ ಸಂಸ್ಥೆಯಾದ ಉದಯರಂಗ ಸಂಸ್ಥೆಯ ಮಾಲೀಕರು, ಕನ್ನಡ ಚಿತ್ರರಂಗದ ಉದ್ಯಮಿ ಹಾಗೂ ಮಳವಳ್ಳಿ ಪಟ್ಟಣದ ಮಹಾಲಕ್ಷ್ಮಿ ಚಿತ್ರಮಂದಿರದ ಮಾಲೀಕರು ಆದ ದಿವಂಗತ ಎಂ ವಿ ಸುಬ್ರಹ್ಮಣ್ಯ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವು ಮಳವಳ್ಳಿ ಪಟ್ಟಣದ ಮಹಾಲಕ್ಷ್ಮಿ ಚಿತ್ರ ಮಂದಿರದ ಹಿಂಬಾಗದ ತೋಟದಲ್ಲಿ ಇರುವ ಅವರ ಸಮಾಧಿ ಬಳಿ ಜರುಗಿತು.
ಇಂದು ಬೆಳಿಗ್ಗೆ ಸುಬ್ರಹ್ಮಣ್ಯ ಅವರ ಸಮಾಧಿ ಬಳಿ ಆಗಮಿಸಿದ ಅವರ ಪತ್ನಿ ಉಷಾ ಸುಬ್ರಹ್ಮಣ್ಯ ಪುತ್ರ ಎಂ ಎಸ್ ಅಭಿಷೇಕ್, ಪ್ರಿಯದರ್ಶಿನಿ, ಉದಯರಂಗ ಸಂಸ್ಥೆಯ ಮಾಲೀಕರಾದ ಕೆ ನಾಗೇಂದ್ರ, ಎಂ ಎನ್ ಮಹೇಶ್ ಕುಮಾರ್ ಸೇರಿದಂತೆ ಇನ್ನಿತರ ಅವರ ಕುಟುಂಬದ ಸದಸ್ಯರು, ಹಲವಾರು ಮುಖಂಡರು, ಗಣ್ಯರು, ಉದಯರಂಗ ಸಂಸ್ಥೆಯ ಸಿಬ್ಬಂದಿ ವರ್ಗ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಸುಬ್ರಹ್ಮಣ್ಯ ಅವರಿಗೆ ಗೌರವ ನಮನ ಸಲ್ಲಿಸಿದರು.
ವರದಿ : ಬಿ ಮಲ್ಲಿಕಾರ್ಜುನಸ್ವಾಮಿ. ಮಳವಳ್ಳಿ.

error: