March 12, 2025

Bhavana Tv

Its Your Channel

ಹೊಳೆಗೆ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಭಟ್ಕಳ ; ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಳಿಕಂಠ ಪ್ರದೇಶದಲ್ಲಿ ಸೋಮವಾರ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಹೊಳೆ ಪಾಲಾಗಿದ್ದ ವ್ಯಕ್ತಿ ತಾಲೂಕಿನ ಮುಂಡಳ್ಳಿಯ ಶ್ರೀಧರ ಶನಿಯಾರ ದೇವಡಿಗ (೪೫) ಎಂದು ಗುರುತಿಸಲಾಗಿದೆ. ಆತ ಹೊಳೆಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಸ್ಥಳೀಯ ಮೀನುಗಾರರು ಹೊಳೆಗೆ ಹಾರಿ ಯುವಕನನ್ನು ರಕ್ಷಿಸುವ ಪ್ರಯತ್ನ ನಡೆಸಿದರಾದರೂ ವ್ಯಕ್ತಿ ಸುಳಿವು ಸಿಕ್ಕಿರಲಿಲ್ಲ. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ, ದೋಣಿಯ ಮೂಲಕ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸಿದರೂ ರಕ್ಷಣಾ ಕಾರ್ಯಚರಣೆ ಫಲ ನೀಡದೇ ಅಗ್ನಿಶಾಮಕ ದಳ ವಾಪಸ್ಸಾಗಿತು. ಸತತ ಕಾರ್ಯಚರಣೆ ನಂತರ ಮೃತನ ಶವ ಪತ್ತೆಯಾಗಿದೆ.

error: