April 27, 2024

Bhavana Tv

Its Your Channel

ಭಟ್ಕಳ ಪುರಸಭೆಯ ಮುಖ್ಯಾಧಿಕಾರಿಯಾಗಿ ರಾಧಿಕಾ ಎಸ್.ಎನ್. ಬುಧವಾರ ಅಧಿಕಾರಿ ಸ್ವೀಕರಿಸಿದರು.

ಭಟ್ಕಳ : ಎಂಜೀನಿಯರ ಪಧವಿಧರೆಯಾಗಿರುವ ರಾಧಿಕಾ ಎಸ್.ಎಸ್ ಮೂಲತಃ ಬೆಂಗಳೂರಿನವರಾಗಿದ್ದಾರೆ. ೨೦೧೪ರಲ್ಲಿ ಕೆ.ಎ.ಎಸ್ ತೇರ್ಗಡೆಯಾದ ಅವರು ಜಿಲ್ಲಾ ಖಜಾನೆ ಅಧಿಕಾರಿಯಾಗಿ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ೨೦೧೫ರಲ್ಲಿ ಕೆ.ಎಂ.ಎ.ಎಸ್ ಅಧಿಕಾರಿಯಾಗಿ ನೇರ ನೇಮಕಾತಿ ಮೂಲಕ ಆಯ್ಕೆ ಆದ ಅವರು ತರಭೇತಿ ಪೂರ್ಣಗೊಂಡ ನಂತರ ಇದೇ ಮೊದಲ ಬಾರಿಗೆ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿ ಕೊಂಡ ನೂತನ ಮುಖ್ಯಾಧಿಕಾರಿ ಅವರಿಗೆ ಹಾಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಟಿ.ದೇವರಾಜು ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ತಾಲ್ಲೂಕಿನ ಉಪವಿಭಾಗಾಧಿಕಾರಿ ಕಛೇರಿ, ಅರಣ್ಯ ಇಲಾಖೆ, ಶಹರ ಪೊಲೀಸ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಮಹಿಳೆಯರೇ ಅಧಿಕಾರ ನಡೆಸುತ್ತಿದ್ದು, ಈಗ ಭಟ್ಕಳ ಪುರಸಭೆ ಕೂಡ ಅದರಲ್ಲಿ ಸೇರ್ಪಡೆಯಾಗಿದೆ.

error: