May 21, 2024

Bhavana Tv

Its Your Channel

ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು

ಭಟ್ಕಳ: ಹಡೀನ ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದು ಓರ್ವ ಬಾಲಕನ ಮೃತ ದೇಹ ಪತ್ತೆಯಾಗಿದ್ದರೆ ಇನ್ನೋರ್ವನ ಸುಳಿವು ಪತ್ತೆಯಾಗಿಲ್ಲ.

ತಾಲೂಕಿನ ಹೆಬಳೆ ಹಾಗೂ ಆಜಾದ ನಗರದ ಎರಡು ಕುಟುಂಬಿಕರು ಹಡೀನ ಸಮುದ್ರ ಕಿನಾರೆಗೆ ಹೋಗಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಸಮುದ್ರದಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದು ತಕ್ಷಣ ಸ್ಥಳೀಯರ ಸಹಾಯದಿಂದ ಓರ್ವನನ್ನು ಮೇಲಕ್ಕೆತ್ತಲಾಯಿತಾದರೂ ಆತ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಮೃತನನ್ನು ಹೆಬಳೆಯ ಮೌಲಾನಾ ನ್ಯಾಮತ್ತುಲ್ಲ ಅಸ್ಕೇರಿ ಅವರ ಪುತ್ರ ಇನಾಮ್ ಅಸ್ಕೇರಿ (14) ಎಂದು ಗುರುತಿಸಲಾಗಿದೆ. ಇನ್ನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು ಆತನನ್ನು ಆಜಾದ ನಗರದ ನಿವಾಸಿ ಮೊಹಮ್ಮದ್ ಕಾಸಿಪ್ (22) ಎಂದು ಗುರುತಿಸಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಲಾಗಿದ್ದು ಕತ್ತಲೆಯಾಗಿದ್ದರಿಂದ ತೊಡಕಾಗುತ್ತಿದೆ ಎನ್ನಲಾಗಿದೆ.

ರವಿವಾರ ಸಂಜೆ ದುರ್ಘಟನೆ ನಡೆದಿದ್ದು ಸುದ್ದಿ ತಿಳಿದು ನೂರಾರು ಜನರು ಸ್ಥಳಕ್ಕೆ ಧಾವಿಸಿ ನಾಪತ್ತೆಯಾದವನ ಹುಡುಕಾಟ ನಡೆಸಿದ್ದಾರೆ. ಭಟ್ಕಳದ ಡಿ.ವೈ.ಎಸ್.ಪಿ. ಮಹೇಶ ಕೆ., ಗ್ರಾಮೀಣ ಇನ್ಸಪೆಕ್ಟರ್ ಚಂದನಗೋಪಾಲ, ಸಬ್ ಇನ್ಸಪೆಕ್ಟರ್ ಮಯೂರ ಪಟ್ಟಣಶೆಟ್ಟಿ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳೂ ಸ್ಥಳದಲ್ಲಿಯೇ ಇದ್ದು ಹುಡುಕುವಲ್ಲಿ ಸಹಕರಿಸುತ್ತಿದ್ದಾರೆ.

error: