May 4, 2024

Bhavana Tv

Its Your Channel

ಅಂತರ್ಜಲ ವೃದ್ಧಿಗೆ “ಅಟಲ್ ಭೂ ಜಲ ಯೋಜನೆ” ವರದಾನ :ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:- ಸದಾ ಬರಗಾಲ ಎದುರಿಸುತ್ತಿರುವ ಗಡಿ ನಾಡಿನ ಬಾಗೇಪಲ್ಲಿ ತಾಲ್ಲೂಕು ದಿನೇ-ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಈ ತಾಲೂಕಿಗೆ ಅಂತರ್ಜಲ ಮಟ್ಟ ಸುಧಾರಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಟಲ್ ಭೂ ಜಲ ಯೋಜನೆ ಅನುಷ್ಠಾನ ಗೊಳಿಸುವುದೆ ವರದಾನ ವಾಗಲಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಜನಪ್ರಿಯ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ ಹೇಳಿದರು.

ಅವರು ಬಾಗೇಪಲ್ಲಿ ತಾಲ್ಲೂಕು ಗೂಳೂರು ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಪುಣ್ಯಕೋಟಿ ಇಂಟರ್ ಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಇವರ ಸಹಯೋಗದೊಂದಿಗೆ ಬಾಗೇಪಲ್ಲಿ ತಾಲ್ಲೂಕು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ ಅಂತರ್ಜಲದ ಅತಿಯಾದ ಬಳಕೆಯಿಂದ ಮುಂದಿನ ಪೀಳಿಗೆಗೆ ನೀರು ಸಿಗುತ್ತೋ, ಇಲ್ಲವೋ ಎಂಬ ಆತಂಕಕ್ಕೆ ಅಟಲ್ ಭೂ ಜಲ ಯೋಜನೆ ಪರಿಹಾರವಾಗಿದೆ. ಈ ಯೋಜನೆಯಿಂದ ಮುಂದಿನ ಪೀಳಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಅಟಲ್ ಭೂ ಜಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಸಮರ್ಪಕ ಅನುಷ್ಠಾನ ಎಲ್ಲರ ಜವಾಬ್ದಾರಿ. ಬಾವಿ ತೋಡಿದರೆ ನೀರು ಬರುತ್ತಿದ್ದ ಬಾಗೇಪಲ್ಲಿ ತಾಲೂಕಿನಲ್ಲಿ ಈಗ ೧೦೦೦ ರಿಂದ ೧೫೦೦ ಅಡಿ ಕೊಳವೆ ಬಾವಿ ಕೊರೆದರೂ ಜಲ ಸಿಗದಂತಾಗಿದೆ. ಇಂಗು ಗುಂಡಿ, ಚೆಕ್ ಡ್ಯಾಂಗಳ ನನಿರ್ಮಾಣ ಮಾಡಬೇಕಿದ್ದು, ಕೆರೆಗೆ ನೀರು ತುಂಬುವ ಯೋಜನೆಯು ಬಾಗೇಪಲ್ಲಿ ತಾಲ್ಲೂಕಿಗೆ ಈಗ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಅಂತರ್ಜಲ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಮಾತನಾಡಿ ಅತಿಯಾದ ಅಂತರ್ಜಲ ಬಳಕೆ ಕಡಿವೆಗೊಳಿಸಿ ಭೂ ಜಲ ಅಭಿವೃದ್ಧಿ ಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಈ ಯೋಜನೆಯಡಿ ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡುವ ಪ್ರದೇಶಗಳಲ್ಲಿ ಭೂ ಜಲ ಅಭಿವೃದ್ಧಿಗೊಳಿಸಲು ಬಾವಿ, ಕೊಳವೆ ಬಾವಿ, ನದಿ, ಕೆರೆ, ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಾಣ, ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಣೆ, ಸುಸ್ಥಿರ ಅಂತರ್ಜಲ ನಿರ್ವಹಣೆ, ನೀರಿನ ಮಿತವ್ಯಯ ಬಳಕೆ ಬಗ್ಗೆ ಜನ ಜಾಗೃತಿ, ಜನ-ಜಾನುವಾರುಗಳಿಗೆ ಗುಣಮಟ್ಟದ ನೀರು ಒದಗಿಸುವ, ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸುವ, ಅಂತರ್ಜಲ ಮರುಪೂರೈಕೆ ಮಾಡುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಇಓ ಮಂಜುನಾಥಸ್ವಾಮಿ, ಜಿಲ್ಲಾ ನೋಡಲ್ ಅಧಿಕಾರಿ ಹರೀಶ್ ಕುಮಾರ್ ಉಮೇಶ್ ಬಿ.ಆರ್,ಭರತ್ ಕೆ.ಡಿ.ಪಿ.ಸದಸ್ಯರಾದ ಅಮರನಾಥ್ ರೆಡ್ಡಿ, ಮಾಜಿ ತಾಲ್ಲೂಕ್ ಪಂಚಾಯ್ತಿ ಅಧ್ಯಕ್ಷರಾದ ರಮೇಶ್ ಬಾಬು, ಕೆ.ಆರ್.ನರೇಂದ್ರ ಬಾಬು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೇಂಕಟಾಯಪ್ಪ, ವಿ.ಎಸ್.ಎಸ್.ಬ್ಯಾoಕ್ ನ ಅಧ್ಯಕ್ಷರಾದ ಸಿ.ಎನ್ ಬಾಬುರೆಡ್ಡಿ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು

ವರದಿ ಗೋಪಾಲ ರೆಡ್ಡಿ ಬಾಗೇಪಲ್ಲಿ

error: