April 26, 2024

Bhavana Tv

Its Your Channel

ಶಾಶ್ವತ ಪರಿಹಾರದ ಮಾತು ತಪ್ಪಿದ ಉಸ್ತುವಾರಿ ಸಚಿವ!

ಬಾಗೇಪಲ್ಲಿ: ಉತ್ತಮ ಮಳೆ ಬಂದು, ಕೆರೆಗೆ ತುಂಬಿದರೆ ಯಾರಿಗೆ ಆಗಲಿ ಸಂತಸ. ಆದರೆ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದ ಜನರಿಗೆ ಮಾತ್ರ ನರಕಯಾತನೆ.

ಅರೇ ಇದೇನಪ್ಪ ಅಂತೀರ, ಹೌದು ಇದು ನಿಜ ಮಾಡಪಲ್ಲಿ ಗ್ರಾಮವು ಸುತ್ತಮುತ್ತಲೂ ಸುಂದರ ಬೆಟ್ಟಗುಡ್ಡಗಳಿಂದ ಆವೃತವಾದ ಕುಗ್ರಾಮವಾಗಿತ್ತು. ಆ ಸುಂದರ ಬೆಟ್ಟಗುಡ್ಡಗಳೇ ಅವರ ಭವಿಷ್ಯಕ್ಕೆ ಕಂಟಕವಾಗಿ ಪರಿಣಮಿಸಿವಿಯೇನೋ? ಎಂಬAತೆ ಕಲ್ಲುಗಣಿಗಾರಿಕೆಗೆ ನಾಶವಾಗುತ್ತಿವೆ.

ಸುತ್ತಲಿನ ಜಲಮೂಲಗಳಿಗೆ ಗಣಿಗಾರಿಕೆ ನಡೆಯುತ್ತಿರುವ ಬೆಟ್ಟಗಳಿಂದ ಹರಿದು ಬರುವ ಕೆಮ್ಮಣ್ಣಿಂದಾಗಿ ಕೆರೆ,ಕುಂಟೆಗಳು ಹೂಳು ತುಂಬಿವೆ. ಅದೇ ಕೆಮ್ಮಣ್ಣಿನ ನೀರು ಕೊಳವೆ ಬಾವಿಗೆ ಹರಿದು ಬಂದು, ಮನೆಗಳಿಗೂ ಅದೇ ನೀರು ಸರಬರಾಜಾಗುತ್ತಿವೆ. ಇದೆಲ್ಲವುಗಳಿಂದ ಗ್ರಾಮಸ್ಥರಿಗೆ ವಿವಿಧ ರೋಗ ರುಜುನಗಳು ಎದುರಾಗುತ್ತಿವೆ. ರಸ್ತೆಗಳು ಹಾಳಾಗಿದ್ದು ತುರ್ತು ಸಂದರ್ಭಗಳಲ್ಲಿ ಪ್ರಾಣಹಾನಿಗೂ ಆಸ್ಪದವಿದೆ. ಹಾಗಾಗಿ ದಯವಿಟ್ಟು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕೆಂದು ಗ್ರಾಮಸ್ಥರ ಒತ್ತಾಯ.

ಆ ಬೆಟ್ಟಗುಡ್ಡಗಳಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದಾಗಿ ಜನತೆ ಹಾಗೂ ಜಾನುವಾರುಗಳಿಗೆ ತೀವ್ರತರವಾದ ಸಮಸ್ಯೆಗಳು ಎದುರಾಗಿವೆ. ಬೆಟ್ಟಗುಡ್ಡಗಳನ್ನೆ ನಂಬಿಕೊAಡು ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿದ್ದ ಬಡ ಜನರು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಬೆಟ್ಟದಲ್ಲಿ ಪುರಾತನ ಮರಗಳು, ಸಾವಿರಾರು ಗಿಡಗಂಟಿಗಳು ಸರ್ವನಾಶವಾಗಿವೆ. ನವಿಲಿನಂತಹ ಪಕ್ಷಿಗಳು, ಜಿಂಕೆಯAತಹ ಪ್ರಾಣಿಗಳು ಆವಾಸಗಳಿಲ್ಲದೆ ದಿಕ್ಕಾಪಾಲಾಗಿ ನಾಯಿಗಳ ಪಾಲಾಗಿವೆ.

ಈ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ರವರ ಗಮನಕ್ಕೆ ತರಲಾಗಿತ್ತು. ಆ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಮಾಡಪಲ್ಲಿ ಗ್ರಾಮದ ಬೆಟ್ಟದ ನೀರು ಹರಿದು ಬರುತ್ತಿದ್ದು ಕುಡಿಯುವ ನೀರಿನ ಸಮಸ್ಯೆಯು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರದ ಕ್ರಮ ಕೈಗೊಳ್ಳುತ್ತೇನೆ ಎಂದು ಟ್ವಿಟರ್ ಮೂಲಕ ಆಶ್ವಾಸನೆ ಕೊಟ್ಟಿದ್ದರು. ಆದರೆ ಆಶ್ವಾಸನೆ ಹುಸಿಯಾಗಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಇದಕ್ಕೆಲ್ಲ ಮೂಲ ಕಾರಣ ಕಲ್ಲುಗಣಿಗಾರಿಕೆಯೇ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾಗಿಯೇ ಗ್ರಾಮೀಣ ಬದುಕುಗಳ ಬಗ್ಗೆ ಯಾರಿಗೂ ಗಂಭೀರತೆ ಇಲ್ಲವಾಗಿದೆ. ರಾಜಕಾರಣಿಗಳಿಗಿಂತ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಗ್ರಾಮೀಣ ಜನರ ಬದುಕು, ಬವಣೆಗಳ ಬಗ್ಗೆ ಕಾಳಜಿ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಗ್ರಾಮಸ್ಥರು. ಏಕೆಂದರೆ ಕಲ್ಲುಗಣಿಗಾರಿಕೆಯು ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗಿಂತ ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಣಯಗಳು ಮುಖ್ಯವಾಗಿರುತ್ತವೆ. ಅವರೇ ಕ್ರಮ ಕೈಗೊಳ್ಳದಿದ್ದಾಗ ಇಂತಹ ಸಮಸ್ಯೆಗಳು ಹತ್ತು ಹಲವು ಸಹಜವಲ್ಲವೇ?.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: